ಮಾಹಿತಿ ಇರುವಲ್ಲಿ ಹೋಗಲು

ಬೈಬಲಲ್ಲಿ ಇರೋದೆಲ್ಲ ಮನುಷ್ಯರ ಆಲೋಚನೆನಾ?

ಬೈಬಲಲ್ಲಿ ಇರೋದೆಲ್ಲ ಮನುಷ್ಯರ ಆಲೋಚನೆನಾ?

ಬೈಬಲ್‌ ಕೊಡೋ ಉತ್ತರ

 ಬೈಬಲನ್ನ ಪವಿತ್ರ ಗ್ರಂಥ ಅಂತಾನೂ ಕರಿತಾರೆ. ಈ ಗ್ರಂಥದಲ್ಲಿ ಎಷ್ಟೊಂದು ಬುದ್ಧಿಮಾತುಗಳು ಇವೆ ಅಂತ ಗೊತ್ತಾ? “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು” ಅಂತ ಬೈಬಲೇ ಹೇಳುತ್ತೆ. (2 ತಿಮೊತಿ 3:16) ಆದ್ರೆ ಅದನ್ನ ನಂಬೋಕೆ ನಮಗೆ ಆಧಾರ ಇರಬೇಕು. ಏನು ಆಧಾರ ಇದೆ ಅಂತ ನೋಡೋಣ.

  •   ಬೈಬಲಲ್ಲಿ ತಿಳಿಸಿರೋ ಇತಿಹಾಸ ಸುಳ್ಳು ಅಂತ ಸಾಬೀತು ಮಾಡೋಕೆ ಇಲ್ಲಿ ತನಕ ಯಾರಿಗೂ ಆಗಿಲ್ಲ.

  •   ಬೈಬಲನ್ನ ಬರೆದವರು ಮುಚ್ಚುಮರೆ ಇಲ್ಲದೇ ತಮ್ಮ ತಪ್ಪಿನ ಬಗ್ಗೆನೂ ಬರೆದಿದ್ದಾರೆ. ಇದೇ ಬೈಬಲ್‌ ಎಷ್ಟು ಸತ್ಯ ಅಂತ ತೋರಿಸುತ್ತೆ.

  •   ಬೈಬಲಲ್ಲಿ ಒಂದು ಮುಖ್ಯ ವಿಷ್ಯ ಇದೆ. ಅದೇನಂದ್ರೆ ಇಡೀ ವಿಶ್ವವನ್ನ ಆಳೋ ಹಕ್ಕು ದೇವರಿಗೆ ಮಾತ್ರನೇ ಇದೆ ಮತ್ತು ಮನುಷ್ಯರ ಬಗ್ಗೆ ತನಗಿರೋ ಉದ್ದೇಶನ ನೆರವೇರಿಸೋಕೆ ಆತನು ತನ್ನ ಆಳ್ವಿಕೆನ ಈ ಭೂಮಿಗೆ ತರ್ತಾನೆ.

  •   ಬೈಬಲನ್ನ ಬರೆದು ಸಾವಿರಾರು ವರ್ಷಗಳಾಗಿವೆ. ಆ ಕಾಲದಲ್ಲಿ ಎಷ್ಟೋ ಜನ ವಿಜ್ಞಾನಕ್ಕೆ ಸಂಬಂಧಪಟ್ಟ ಕೆಲವು ವಿಷ್ಯಗಳನ್ನ ತಪ್ಪಾಗಿ ನಂಬಿದ್ರು. ಆದ್ರೆ ಇದ್ಯಾವುದನ್ನೂ ಬೈಬಲಲ್ಲಿ ಬರೆದಿಲ್ಲ, ಅದ್ರಲ್ಲಿ ಸತ್ಯ ಮಾತ್ರನೇ ಇದೆ.

  •   ಬೈಬಲಲ್ಲಿ ಹೇಳಿರೋ ಭವಿಷ್ಯವಾಣಿಗಳು ನಿಜ ಆಗಿದೆ ಅಂತ ಇತಿಹಾಸನೂ ತೋರಿಸ್ಕೊಡುತ್ತೆ.