ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನುಕಂಪ ತೋರಿಸಿ

ಅನುಕಂಪ ತೋರಿಸಿ

ಯಾಕೆ ಪ್ರಾಮುಖ್ಯ?

ಬೇರೆಯವರಿಗೆ ಅನುಕಂಪ ತೋರಿಸಿಲ್ಲ ಅಂದ್ರೆ ಅವರಲ್ಲಿರೋ ಕುಂದು ಕೊರತೆಗಳೇ ಜಾಸ್ತಿ ಕಾಣುತ್ತೆ. ಅವರಿಗೂ-ನಮಗೂ ಇರೋ ವ್ಯತ್ಯಾಸದ ಮೇಲೆನೇ ನಮ್ಮ ಗಮನ ಹೋಗುತ್ತೆ. ಅದೂ ಅಲ್ಲದೇ ಅವರಿಗಿಂತ ನಾವೇ ಶ್ರೇಷ್ಠ ಅನ್ನೋ ಭಾವನೆ ನಮ್ಮ ಮನಸ್ಸಿಗೆ ಬಂದುಬಿಡುತ್ತೆ. ಈ ತರ ಯೋಚಿಸಿದ್ರೆ ನಮ್ಮ ಮನಸ್ಸಲ್ಲಿ ಅವರ ಮೇಲೆ ದ್ವೇಷ ಬೆಳೆಯುತ್ತೆ.

ಪವಿತ್ರ ಗ್ರಂಥದಲ್ಲಿರೋ ಸಲಹೆ

“ಆನಂದಿಸುವವರೊಂದಿಗೆ ಆನಂದಿಸಿರಿ; ಅಳುವವರೊಂದಿಗೆ ಅಳಿರಿ.”—ರೋಮನ್ನರಿಗೆ 12:15.

ಈ ಸಲಹೆಯಿಂದ ನಾವೇನು ಕಲಿಬಹುದು? ಬೇರೆಯವರಿಗೆ ಅನುಕಂಪ ತೋರಿಸಬೇಕು. ಅನುಕಂಪ ತೋರಿಸೋದು ಅಂದ್ರೆ ಇನ್ನೊಬ್ಬರ ಜಾಗದಲ್ಲಿ ನಿಂತು ಅವರ ಭಾವನೆಗಳನ್ನ ಅರ್ಥಮಾಡಿಕೊಳ್ಳೋದು.

ಅನುಕಂಪ ತೋರಿಸಿದ್ರೆ ಸಿಗೋ ಪ್ರಯೋಜ್ನ

ಅನುಕಂಪ ತೋರಿಸಿದ್ರೆ ಬೇರೆಯವರಿಗೂ ನಮಗೂ ಅಷ್ಟೇನು ವ್ಯತ್ಯಾಸ ಇಲ್ಲ, ಅವರೂ ನಮ್ಮ ಹಾಗೇನೇ ಅಂತ ಅರ್ಥ ಆಗುತ್ತೆ. ನಮ್ಮಲ್ಲಿರೋ ಭಾವನೆಗಳೇ ಅವರಲ್ಲೂ ಇದೆ ಅಂತ ಗೊತ್ತಾಗುತ್ತೆ. ಅವರು ಯಾವುದೇ ದೇಶ, ಭಾಷೆ ಅಥವಾ ಬಣ್ಣದವರಾಗಿರಲಿ ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋದನ್ನ ಒಪ್ಪಿಕೊಳ್ತೀವಿ. ಇದನ್ನ ಅರ್ಥ ಮಾಡಿಕೊಂಡ್ರೆ ಬೇರೆಯವರ ಬಗ್ಗೆ ಒಳ್ಳೇದನ್ನೇ ಯೋಚಿಸ್ತೀವಿ.

ಅನುಕಂಪ ತೋರಿಸಿದ್ರೆ ಬೇರೆಯವರನ್ನ ಕೀಳಾಗಿ ನೋಡಲ್ಲ. ಸೆನೆಗಲ್‌ನಲ್ಲಿ ಇರೋ ಆನ್‌-ಮೇರಿ ಒಂದು ಸಮಯದಲ್ಲಿ ತನಗಿಂತ ಕೆಳಗಿನ ಜಾತಿಯವ್ರನ್ನ ಕೀಳಾಗಿ ನೋಡ್ತಿದ್ದಳು. ಆದ್ರೆ ಅವಳು ಅನುಕಂಪ ತೋರಿಸೋಕೆ ಕಲಿತಿದ್ರಿಂದ ಈ ಭಾವನೆಗಳನ್ನ ಬದಲಾಯಿಸಿಕೊಳ್ಳೋಕೆ ಸಾಧ್ಯ ಆಯ್ತು. “ಆ ಜನ ಎಷ್ಟು ಕಷ್ಟ ಪಡ್ತಿದ್ದಾರೆ ಅಂತ ನಾನು ನೋಡ್ದೆ. ನಾನೇನಾದ್ರು ಅವರ ಕುಟುಂಬದಲ್ಲಿ ಹುಟ್ಟಿದ್ದಿದ್ರೆ ನನ್ನ ಪರಿಸ್ಥಿತಿ ಹೇಗಿರ್ತಿತ್ತು, ಭಾವನೆಗಳು ಹೇಗಿರ್ತಿತ್ತು ಅಂತ ಯೋಚಿಸ್ದೆ. ಆಗ ನಂಗೆ ನಾನು ಯಾವುದೇ ರೀತಿಲೂ ಅವರಿಗಿಂತ ಶ್ರೇಷ್ಠಳಲ್ಲ ಅಂತ ಅರ್ಥ ಆಯ್ತು. ನಾನು ಅವರಿಗಿಂತ ದೊಡ್ಡವಳು ಅನಿಸಿಕೊಳ್ಳೋಷ್ಟು ದೊಡ್‌ ಕೆಲಸ ಏನೂ ಮಾಡಿಲ್ಲ” ಅಂತ ಅವಳು ಹೇಳುತ್ತಾಳೆ. ನಾವು ಬೇರೆಯವರ ಜಾಗದಲ್ಲಿ ನಿಂತು ಅವರ ಪರಿಸ್ಥಿತಿನ ಅರ್ಥಮಾಡಿಕೊಂಡ್ರೆ ಅವರ ಬಗ್ಗೆ ತಪ್ಪಭಿಪ್ರಾಯ ಬೆಳೆಸಿಕೊಳ್ಳೋ ಬದಲು ಅನುಕಂಪ ತೋರಿಸ್ತೀವಿ.

ನೀವೇನು ಮಾಡಬಹುದು?

ನಿಮ್ಮ ಮತ್ತು ಆ ಗುಂಪಿನ ನಡುವೆ ಇರೋ ಸಮಾನತೆ ಬಗ್ಗೆ ಯೋಚಿಸಿ. ಉದಾಹರಣೆಗೆ ಈ ಕೆಳಗಿನ ವಿಷಯಗಳನ್ನ ಮಾಡ್ವಾಗ ಬೇರೆಯವರಿಗೆ ಹೇಗನ್ಸುತ್ತೆ ಅಂತ ಯೋಚಿಸಿ

ಬೇರೆಯವರಿಗೆ ಅನುಕಂಪ ತೋರಿಸಿದ್ರೆ ಅವರೂ ನಮ್ಮ ಹಾಗೇನೇ ಅಂತ ಅರ್ಥಮಾಡಿಕೊಳ್ತೀವಿ

  • ಕುಟುಂಬದವರ ಜೊತೆ ಕೂತು ಊಟ ಮಾಡ್ವಾಗ

  • ದಿನ ಎಲ್ಲಾ ಕೆಲಸ ಮಾಡಿ ಮನೆಗೆ ಬಂದಾಗ

  • ಫ್ರೆಂಡ್ಸ್‌ ಜೊತೆ ಸ್ವಲ್ಪ ಹೊತ್ತು ಕಾಲ ಕಳೀವಾಗ

  • ಇಷ್ಟ ಆಗಿರೋ ಹಾಡುಗಳನ್ನ ಕೇಳುವಾಗ

ಆಮೇಲೆ ಅವರ ಜಾಗದಲ್ಲಿ ನೀವಿದ್ದಿದ್ರೆ ನಿಮಗೆ ಹೇಗನಿಸುತ್ತಿತ್ತು ಅಂತ ಯೋಚಿಸಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

  • ‘ಯಾರಾದ್ರು ನಂಗೆ ಅವಮಾನ ಮಾಡಿದ್ರೆ ಏನು ಮಾಡ್ತೀನಿ?’

  • ‘ನನ್ನ ಬಗ್ಗೆ ಏನೂ ಗೊತ್ತಿಲ್ಲದೇ ಯಾರಾದ್ರು ನನ್ನ ಬಗ್ಗೆ ತಪ್ಪಭಿಪ್ರಾಯ ಬೆಳೆಸಿಕೊಂಡ್ರೆ ಹೇಗನ್ಸುತ್ತೆ?’

  • ‘ನಾನೇನಾದ್ರು ಆ ಗುಂಪಲ್ಲಿ ಇದ್ದಿದ್ರೆ ಬೇರೆಯವರು ನನ್ನ ಜೊತೆ ಹೇಗೆ ನಡ್ಕೋಬೇಕು ಅಂತ ಇಷ್ಟಪಡ್ತಿದ್ದೆ?’