ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೇದಭಾವ ಇಲ್ಲದ ಜೀವನ

ಭೇದಭಾವ ಇಲ್ಲದ ಜೀವನ

ಲಕ್ಷಾಂತರ ಜನ ಪವಿತ್ರ ಗ್ರಂಥದಲ್ಲಿ ಇರೋ ಸಲಹೆ ಪಾಲಿಸಿ ಭೇದಭಾವನ ತಮ್ಮ ಮನಸ್ಸಿಂದ ತೆಗೆದುಹಾಕಿದ್ದಾರೆ. ನಿಜ ಹೇಳಬೇಕಂದ್ರೆ ಭೇದಭಾವನ ನಮ್ಮ ಮನಸ್ಸಿಂದ ಬುಡ ಸಮೇತ ಕಿತ್ತು ಎಸೆಯೋಕೆ ಆಗಲ್ಲ. ಹಾಗಾದ್ರೆ ಭೇದಭಾವ ಯಾವಾಗ್ಲೂ ಹೀಗೆ ಇರುತ್ತಾ?

ಒಂದು ಆದರ್ಶ ಸರ್ಕಾರ

ಸರ್ಕಾರಗಳು ಎಷ್ಟೇ ಪ್ರಯತ್ನ ಮಾಡಿದ್ರು ಜನರ ಮನಸ್ಸಿಂದ ಭೇದಭಾವನ ತೆಗೆದುಹಾಕೋಕೆ ಆಗ್ತಿಲ್ಲ. ಭೇದಭಾವನ ತೆಗೆದುಹಾಕುವಂಥ ಸರ್ಕಾರ ಯಾವುದಾದ್ರು ಬರುತ್ತಾ?

ಭೇದಭಾವನ ಬುಡ ಸಮೇತ ಕಿತ್ತು ಎಸಿಬೇಕು ಅಂದ್ರೆ ಒಂದು ಸರ್ಕಾರ ಏನು ಮಾಡಬೇಕು:

  1. 1. ಜನರ ಯೋಚ್ನೆನ ಬದಲಾಯಿಸಬೇಕು.

  2. 2. ಜನರ ಮನಸ್ಸಿಗೆ ಭೇದಭಾವದಿಂದ ಆಗಿರೋ ನೋವನ್ನ ತೆಗೆದುಹಾಕಬೇಕು.

  3. 3. ಅದರ ನಾಯಕರು ಭೇದಭಾವ ಮಾಡಬಾರದು ಮತ್ತು ಎಲ್ಲ ಜನರನ್ನ ಸಮಾನವಾಗಿ ನೋಡಬೇಕು.

  4. 4. ಎಲ್ಲ ಜನರ ಮಧ್ಯೆ ಐಕ್ಯತೆ ಇರೋ ಹಾಗೆ ನೋಡಿಕೊಳ್ಳಬೇಕು.

ಪವಿತ್ರ ಗ್ರಂಥವಾದ ಬೈಬಲಿನಲ್ಲಿ ಈ ವಿಷಯಗಳನ್ನೆಲ್ಲ ಮಾಡೋ ಸರ್ಕಾರದ ಬಗ್ಗೆನೇ ಇದೆ. ಈ ಸರ್ಕಾರ “ದೇವರ ರಾಜ್ಯ.”—ಲೂಕ 4:43.

ಬನ್ನಿ ಈ ಸರ್ಕಾರ ಏನೇನು ಮಾಡುತ್ತೆ ಅಂತ ನೋಡೋಣ.

1. ಒಳ್ಳೇ ವಿಷಯಗಳನ್ನ ಕಲಿಸುತ್ತೆ

‘ಭೂನಿವಾಸಿಗಳು ನೀತಿಜ್ಞಾನವನ್ನು ಪಡೆದುಕೊಳ್ಳುವರು.’—ಯೆಶಾಯ 26:9.

‘ನೀತಿಯಿಂದ ಸಮಾಧಾನವು ಫಲಿಸುವುದು, ಶಾಂತಿ ನಿರ್ಭಯಗಳು ನೀತಿಯ ನಿತ್ಯಪರಿಣಾಮ ವಾಗಿರುವುದು.’—ಯೆಶಾಯ 32:17.

ಈ ವಚನದ ಅರ್ಥ ಏನು? ದೇವರ ರಾಜ್ಯ ನೀತಿಯನ್ನು ಫಲಿಸುತ್ತೆ ಅಂದ್ರೆ ಯಾವುದು ಸರಿ ಯಾವುದು ತಪ್ಪು ಅಂತ ಜನರಿಗೆ ಕಲಿಸುತ್ತೆ. ಇದನ್ನ ಕಲಿತಾಗ ಜನರು ಎಲ್ಲರ ಜೊತೆಗೆ ಚೆನ್ನಾಗಿ ಬೆರಿತಾರೆ ಮತ್ತು ಒಬ್ಬರಿಗೊಬ್ಬರು ಪ್ರೀತಿ ತೋರಿಸುತ್ತಾರೆ.

2. ದುಃಖ, ನೋವನ್ನ ತೆಗೆದುಹಾಕುತ್ತೆ

ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:4.

ಈ ವಚನದ ಅರ್ಥ ಏನು? ಅನ್ಯಾಯದಿಂದ ಮನಸ್ಸಿಗೆ ಆದ ನೋವನ್ನ ದೇವರ ರಾಜ್ಯ ತೆಗೆದುಹಾಕುತ್ತೆ. ಮನಸ್ಸಲ್ಲಿ ನೋವೇ ಇರಲ್ಲ ಅಂದಮೇಲೆ ಯಾರ ಮೇಲೆ ದ್ವೇಷನೂ ಇರಲ್ಲ ಭೇದಭಾವನೂ ಮಾಡಲ್ಲ.

3. ಒಳ್ಳೇ ನಾಯಕತ್ವ ಇರುತ್ತೆ

“ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು.”—ಯೆಶಾಯ 11:3, 4.

ಈ ವಚನದ ಅರ್ಥ ಏನು? ದೇವರ ಸರ್ಕಾರದ ನಾಯಕ ಯೇಸು ಕ್ರಿಸ್ತ. ಅವನು ಆಳುವಾಗ ಜನರಿಗೆ ಪಕ್ಷಪಾತ ಮಾಡಲ್ಲ. ಎಲ್ಲ ದೇಶದವರನ್ನ ಸಮಾನವಾಗಿ ನೋಡ್ತಾನೆ. ಎಲ್ಲಾ ಜನರು ದೇವರ ನೀತಿ-ನಿಯಮನ ಪಾಲಿಸೋ ಹಾಗೆ ನೋಡಿಕೊಳ್ತಾನೆ.

4. ಜನರ ಮಧ್ಯೆ ಐಕ್ಯತೆ ಇರೋ ಹಾಗೆ ನೋಡಿಕೊಳ್ಳುತ್ತೆ

ಜನರು “ಒಂದೇ ಮನಸ್ಸುಳ್ಳವರೂ ಒಂದೇ ಪ್ರೀತಿಯುಳ್ಳವರೂ ಅನ್ಯೋನ್ಯಭಾವವುಳ್ಳವರೂ, ಮನಸ್ಸಿನಲ್ಲಿ ಒಂದೇ ಆಲೋಚನೆಯುಳ್ಳವರೂ” ಆಗಿರುವಂತೆ ದೇವರ ರಾಜ್ಯ ಕಲಿಸುತ್ತೆ.—ಫಿಲಿಪ್ಪಿ 2:2.

ಈ ವಚನದ ಅರ್ಥ ಏನು? ಈ ಸರ್ಕಾರದ ಕೆಳಗಿರೋ ಜನರು ನಮ್ಮ ಮಧ್ಯೆ ಐಕ್ಯತೆ ಇದೆ ಅಂತ ಬಾಯಿಮಾತಿಗೆ ಹೇಳಲ್ಲ. ಬದಲಿಗೆ ನಿಜವಾಗಿ ಐಕ್ಯರಾಗಿ ಇರುತ್ತಾರೆ. ಯಾಕಂದ್ರೆ ಅವರ ಮಧ್ಯೆ ಪ್ರೀತಿ ಇರುತ್ತೆ.