ವಾಚಕರಿಂದ ಪ್ರಶ್ನೆಗಳು
ಯೇಸು ಒಡೆಯನ ರಾತ್ರಿ ಊಟ ಮಾಡುವಾಗ 70 ಶಿಷ್ಯರು ಎಲ್ಲಿ ಹೋಗಿದ್ರು? ಅವರು ಯೇಸುನ ಬಿಟ್ಟುಹೋಗಿದ್ರಾ?
ಆ 70 ಶಿಷ್ಯರು ಅಲ್ಲಿ ಇರ್ಲಿಲ್ಲ ಅಂದತಕ್ಷಣ ಅವರು ಯೇಸುನ ಬಿಟ್ಟುಹೋಗಿಬಿಟ್ರು ಅಂತನೋ ಅಥವಾ ಯೇಸುಗೆ ಅವರು ಇಷ್ಟ ಆಗ್ಲಿಲ್ಲ ಅಂತನೋ ನಾವು ಅಂದ್ಕೊಬಾರದು. ಆ ರಾತ್ರಿನ ಯೇಸು ತನ್ನ ಅಪೊಸ್ತಲರ ಜೊತೆ ಕಳಿಬೇಕು ಅಂತ ಅಂದ್ಕೊಂಡ ಅಷ್ಟೇ.
ಯೇಸುಗೆ ಆ 12 ಜನ್ರೂ ಶಿಷ್ಯರೇ, 70 ಜನ್ರೂ ಶಿಷ್ಯರೇ. ಅವ್ರೆಲ್ರೂ ಅವನಿಗೆ ಇಷ್ಟಾನೇ. ಆದ್ರೆ ತನ್ನ ಶಿಷ್ಯರಲ್ಲಿ 12 ಜನ್ರನ್ನ ಮೊದ್ಲು ಆರಿಸ್ಕೊಂಡು ಅವ್ರನ್ನ ಅಪೊಸ್ತಲರು ಅಂತ ಕರೆದ. (ಲೂಕ 6:12-16) ಯೇಸು ಈ “12 ಶಿಷ್ಯರನ್ನ ಕರೆದು” “ದೇವರ ಆಳ್ವಿಕೆ ಬಗ್ಗೆ ಸಾರೋಕೆ, ಜನ್ರನ್ನ ವಾಸಿಮಾಡೋಕೆ” ಅವ್ರನ್ನ ಕಳಿಸಿದಾಗ ಅವನು ಗಲಿಲಾಯದಲ್ಲಿದ್ದ. (ಲೂಕ 9:1-6) ಆಮೇಲೆ ಯೂದಾಯದಲ್ಲಿ ‘ಬೇರೆ 70 ಜನ್ರನ್ನ ಆರಿಸ್ಕೊಂಡು ಅವ್ರನ್ನ ಇಬ್ಬಿಬ್ಬರಾಗಿ ಕಳಿಸಿದ.’ (ಲೂಕ 9:51; 10:1) ಇದ್ರಿಂದ ಯೇಸುವಿನ ಶಿಷ್ಯರು ಬರೀ ಒಂದು ಕಡೆ ಅಲ್ಲ, ಬೇರೆಬೇರೆ ಕಡೆ ಇದ್ರು ಅಂತ ಗೊತ್ತಾಗುತ್ತೆ.
ಯೇಸು ತಾನು ಸಾಯೋ ಸಮಯ ಹತ್ರ ಆದಾಗ ಯೂದಾಯ, ಗಲಿಲಾಯ ಮತ್ತು ಪೆರೀಯದಲ್ಲಿದ್ದ ತನ್ನ ಶಿಷ್ಯರನ್ನೆಲ್ಲ ಸೇರಿಸಿ ಪಸ್ಕನ ಒಂದು ದೊಡ್ಡ ಹಬ್ಬದ ತರ ಆಚರಿಸಲಿಲ್ಲ. ಅದನ್ನ ತನ್ನ ಅಪೊಸ್ತಲರ ಜೊತೆ ಆಚರಿಸಬೇಕು ಅಂತ ಆತನಿಗೆ ಆಸೆ ಇತ್ತು. ಅದಕ್ಕೇ ಅವ್ರನ್ನ ಮಾತ್ರ ಯೆರೂಸಲೇಮಿಗೆ ಕರ್ಕೊಂಡು ಹೋದ. ಹಾಗಾಗಿ ಅವನು ತನ್ನ 12 ಅಪೊಸ್ತಲರಿಗೆ “ನಾನು ಕಷ್ಟ ಅನುಭವಿಸೋ ಮುಂಚೆ ನಿಮ್ಮ ಜೊತೆ ಈ ಪಸ್ಕದ ಊಟ ಮಾಡಬೇಕಂತ ತುಂಬ ದಿನದಿಂದ ಕಾಯ್ತಾ ಇದ್ದೆ” ಅಂತ ಹೇಳಿದನು. (ಲೂಕ 22:15) ಹಾಗಂತ ಬೇರೆ ಶಿಷ್ಯರು ಪಸ್ಕ ಆಚರಿಸ್ಲಿಲ್ಲ ಅಂತಲ್ಲ. ಯೇಸುವಿನ ಶಿಷ್ಯರಾದ ಯೆಹೂದ್ಯರಿಗೆ ಪಸ್ಕ ಹಬ್ಬನ ತಮ್ಮ ಕುಟುಂಬದವ್ರ ಜೊತೆ ಆಚರಿಸೋ ರೂಢಿ ಇದ್ದಿರಬಹುದು.—ವಿಮೋ. 12:6-11, 17-20.
ಯೇಸು ಈ ತರ ಮಾಡೋಕೆ ಒಂದು ಕಾರಣ ಇತ್ತು. ಅದೇನಂದ್ರೆ ಯೇಸು ಇನ್ನೇನು ತನ್ನ ಜೀವ ಕೊಡ್ಲಿಕ್ಕಿದ್ದನು. ಆತನು ‘ದೇವರ ಕುರಿಮರಿಯಾಗಿ ಲೋಕದ ಪಾಪವನ್ನ ತೆಗೆದುಹಾಕಲಿದ್ದನು.’ (ಯೋಹಾ. 1:29) ಆದ್ರೆ ಯೇಸು ಯೆರೂಸಲೇಮಲ್ಲೇ ಸಾಯಬೇಕಿತ್ತು. ಯಾಕಂದ್ರೆ ಜನ್ರು ದೇವರಿಗೆ ಬಲಿ ಅರ್ಪಿಸ್ತಾ ಇದ್ದಿದ್ದು ಅಲ್ಲೇನೇ. ಅದ್ರಲ್ಲೂ ಮುಖ್ಯವಾಗಿ ಪಸ್ಕದ ಸಮಯದಲ್ಲಿ ಅರ್ಪಿಸ್ತಿದ್ದ ಕುರಿಮರಿ ಇಸ್ರಾಯೇಲ್ಯರಿಗೆ ಯೆಹೋವ ತಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದನ್ನ ನೆನಪಿಸ್ತಿತ್ತು. (1 ಕೊರಿಂ. 5:7, 8) ಯೇಸುನೂ ಕುರಿಮರಿ ತರಾನೇ ಇದ್ದನು. ಅವನ ಬಲಿ ಆ ಪ್ರಾಣಿಗಳ ಬಲಿಗಿಂತ ದೊಡ್ಡದಾಗಿತ್ತು. ಯಾಕಂದ್ರೆ ಅವನು ಭೂಮಿಲಿರೋ ಎಲ್ಲಾ ಮನುಷ್ಯರನ್ನೂ ಪಾಪ ಮತ್ತು ಮರಣದಿಂದ ಬಿಡಿಸೋಕಿದ್ದನು. ಯೇಸು ಕೊಟ್ಟ ಈ ಬಲಿಯಿಂದ ಆ 12 ಅಪೊಸ್ತಲರಿಗೆ ಕ್ರೈಸ್ತ ಸಭೆಯ ಅಡಿಪಾಯ ಆಗೋಕೆ ಅವಕಾಶ ಸಿಕ್ತು. (ಎಫೆ. 2:20-22) ಇನ್ನೊಂದು ವಿಷ್ಯ ಏನಂದ್ರೆ, ಪವಿತ್ರ ಪಟ್ಟಣವಾದ ಯೆರೂಸಲೇಮಲ್ಲಿರೋ “12 ಅಡಿಪಾಯ ಕಲ್ಲುಗಳ” ಮೇಲೆ “ಕುರಿಮರಿಯ 12 ಅಪೊಸ್ತಲರ ಹೆಸ್ರು ಬರೆದಿತ್ತು.” (ಪ್ರಕ. 21:10-14) ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವನ ಇಷ್ಟನ ನೆರವೇರಿಸೋದ್ರಲ್ಲಿ ಈ 12 ಅಪೊಸ್ತಲರು ತುಂಬ ವಿಶೇಷವಾದ ಕೆಲಸನ ಮಾಡೋಕಿದ್ರು. ಅದಕ್ಕೇ ಯೇಸು ಅವ್ರ ಜೊತೆ ಕೊನೇ ಪಸ್ಕನ ಆಚರಿಸೋಕೆ ಅದಾದ್ಮೇಲೆ ಒಡೆಯನ ರಾತ್ರಿ ಊಟ ಮಾಡೋಕೆ ಆಸೆಪಟ್ಟ.
ಆ 70 ಜನ ಮತ್ತು ಬೇರೆ ಶಿಷ್ಯರು ಆ ರಾತ್ರಿ ಯೇಸು ಜೊತೆ ಇರ್ಲಿಲ್ಲ ನಿಜ. ಆದ್ರೆ ಯೇಸುಗೆ ಕೊನೇ ತನಕ ನಿಯತ್ತಾಗಿರೋ ಎಲ್ಲಾ ಶಿಷ್ಯರಿಗೆ ಒಡೆಯನ ರಾತ್ರಿ ಊಟದ ಏರ್ಪಾಡಿಂದ ತುಂಬ ಪ್ರಯೋಜನ ಆಗ್ತಿತ್ತು. ಅಷ್ಟೇ ಅಲ್ಲ, ಅವತ್ತು ಯೇಸು ತನ್ನ ಅಪೊಸ್ತಲರ ಜೊತೆ ಮಾಡ್ಕೊಂಡ ಒಪ್ಪಂದದಲ್ಲಿ ಅವರು ಮಾತ್ರ ಅಲ್ಲ, ಮುಂದೆ ಅಭಿಷಿಕ್ತರಾದವರೂ ಬರ್ತಾರೆ. ಇದ್ರಿಂದ ಅವರು ಯೇಸು ಜೊತೆ ರಾಜರಾಗಿ ಆಳ್ತಾರೆ.—ಲೂಕ 22:29, 30.