ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ನಿಜವಾಗಿ ಅಷ್ಟು ಕಾಲ ಬದುಕಿದ್ದರೋ?

ಅವರು ನಿಜವಾಗಿ ಅಷ್ಟು ಕಾಲ ಬದುಕಿದ್ದರೋ?

ಅವರು ನಿಜವಾಗಿ ಅಷ್ಟು ಕಾಲ ಬದುಕಿದ್ದರೋ?

ಆದಾಮನು 930 ವರ್ಷ, ಸೇತನು 912 ವರ್ಷ ಮತ್ತು ಮೆತೂಷೆಲಹನು ಸಾವಿರಕ್ಕೆ ಕೇವಲ 31 ವರ್ಷ ಕಡಿಮೆ ಅಂದರೆ 969 ವರ್ಷ ಜೀವಿಸಿದ್ದರೆಂದು ಬೈಬಲ್‌ ತಿಳಿಸುತ್ತದೆ! (ಆದಿಕಾಂಡ 5:​5, 8, 27) ಆ ವರುಷಗಳು ನಮ್ಮ ಇಂದಿನ ಕಾಲದ ವರ್ಷಗಳಷ್ಟೇ ಉದ್ದವಿದ್ದವೋ ಇಲ್ಲವೆ ಅವುಗಳಿಗಿಂತ ಚಿಕ್ಕ ಅವಧಿಯದ್ದಾಗಿದ್ದವೋ ಅಂದರೆ ಕೆಲವರು ಸೂಚಿಸಿರುವ ಪ್ರಕಾರ ಆ ವರ್ಷಗಳು ಪ್ರಾಯಶಃ ನಮ್ಮ ತಿಂಗಳುಗಳಿಗೆ ಸಮಾನವಾಗಿದ್ದವೋ?

ಆ ವರ್ಷಗಳು ನಮ್ಮ ಅಕ್ಷರಶಃ ವರ್ಷಗಳಷ್ಟೇ ಉದ್ದವಾಗಿದ್ದವೆಂದು ಬೈಬಲಿನ ಆಂತರಿಕ ಪುರಾವೆಯು ತಿಳಿಸುತ್ತದೆ. ಗಮನಿಸಿರಿ: ಆ ಪುರಾತನ ಕಾಲದ ಒಂದು ವರ್ಷವು ನಮ್ಮ ಒಂದು ತಿಂಗಳಿನಷ್ಟು ಉದ್ದವಿರುತ್ತಿದ್ದಲ್ಲಿ, ಈ ಪುರುಷರು ಅಶಕ್ಯವಾದ ಚಿಕ್ಕ ಪ್ರಾಯದಲ್ಲೇ ತಂದೆಗಳಾಗಿರುತ್ತಿದ್ದರು: ಕೇನಾನನು ಆರು ವರ್ಷ ಪ್ರಾಯಕ್ಕಿಂತ ಮುಂಚೆ, ಮತ್ತು ಮಹಲಲೇಲ ಹಾಗೂ ಹನೋಕನು ಐದಕ್ಕಿಂತ ತುಸು ಹೆಚ್ಚು ಪ್ರಾಯದೊಳಗೆ ತಂದೆಗಳಾಗಿರುತ್ತಿದ್ದರು.​—⁠ಆದಿಕಾಂಡ 5:12, 15, 21.

ಅದಲ್ಲದೆ ಆ ಕಾಲದಲ್ಲಿ ಜೀವಿಸಿದ್ದ ಜನರು ದಿನಗಳು, ತಿಂಗಳುಗಳು ಮತ್ತು ವರ್ಷಗಳ ನಡುವಣ ಭೇದವನ್ನು ಚೆನ್ನಾಗಿ ಅರಿತವರಾಗಿದ್ದರು. (ಆದಿಕಾಂಡ 1:​14-16; 8:13) ವಾಸ್ತವದಲ್ಲಿ, ನೋಹನ ಸವಿವರವಾದ ಕಾಲಗಣನೆಯು ಒಂದು ತಿಂಗಳಿನ ಉದ್ದವೆಷ್ಟು ಎಂಬುದನ್ನು ನಿರ್ಧರಿಸಲು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗಾಗಿ, ಆದಿಕಾಂಡ 7:11, 24 ಮತ್ತು ಆದಿಕಾಂಡ 8:3, 4ನ್ನು ಹೋಲಿಸುವಲ್ಲಿ, ಎರಡನೆಯ ತಿಂಗಳಿನ 17ನೇ ದಿನದಿಂದ ಏಳನೆಯ ತಿಂಗಳಿನ 17ನೇ ದಿನದ ತನಕವಿದ್ದ ಐದು ತಿಂಗಳುಗಳು 150 ದಿನಗಳಿಗೆ ಸಮಾನವಾಗಿದ್ದವು ಎಂದು ವ್ಯಕ್ತವಾಗುತ್ತದೆ. ಹೀಗೆ ನೋಹನು ತಿಂಗಳೊಂದಕ್ಕೆ 30 ದಿನಗಳನ್ನು ಲೆಕ್ಕಿಸಿದ್ದನೆಂದೂ ಅಂಥ 12 ತಿಂಗಳುಗಳು ಒಂದು ವರ್ಷ ಆಗುತ್ತವೆ ಎಂದೂ ಅದು ಸೂಚಿಸುತ್ತದೆ.​—⁠ಆದಿಕಾಂಡ 8:5-13. *

ಆದರೆ ಜನರು 900 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಬದುಕಲು ಹೇಗೆ ಸಾಧ್ಯವಿತ್ತು? ದೇವರು ಮಾನವರನ್ನು ಸದಾ ಜೀವಿಸುವುದಕ್ಕಾಗಿ ಉಂಟುಮಾಡಿದ್ದನು ಆದರೆ ಆದಾಮನ ಪಾಪದಿಂದಾಗಿ ಅಪರಿಪೂರ್ಣತೆ ಮತ್ತು ಮರಣವು ಮಾನವ ಕುಟುಂಬದ ಮೇಲೆ ಬಂತೆಂದು ಬೈಬಲ್‌ ನಮಗೆ ತಿಳಿಸುತ್ತದೆ. (ಆದಿಕಾಂಡ 2:17; 3:17-19; ರೋಮಾಪುರ 5:12) ಜಲಪ್ರಳಯಕ್ಕೆ ಮುಂಚೆ ಜೀವಿಸಿದ್ದವರು ಇಂದಿರುವ ನಮಗಿಂತ ಪರಿಪೂರ್ಣತೆಗೆ ಹೆಚ್ಚು ಹತ್ತಿರವಾಗಿದ್ದರು ಅಂದರೆ ನಮ್ಮಷ್ಟು ಹೆಚ್ಚು ಅಪರಿಪೂರ್ಣರಾಗಿರಲಿಲ್ಲ ಮತ್ತು ಇದೇ ಅವರ ದೀರ್ಘಾಯುಷ್ಯದ ಪ್ರಧಾನ ಕಾರಣವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಉದಾಹರಣೆಗಾಗಿ, ಮೆತೂಷೆಲಹನು ಆದಾಮನಿಂದ ಹಿಡಿದು ಬರೀ ಎಂಟನೆಯ ತಲೆಮಾರಿನವನಾಗಿದ್ದನು.​—⁠ಲೂಕ 3:​37, 38.

ಆದರೆ ಬೇಗನೆ ಯೆಹೋವ ದೇವರು ತನ್ನ ಕುಮಾರನಾದ ಯೇಸು ಕ್ರಿಸ್ತನ ಸುರಿಸಲ್ಪಟ್ಟ ರಕ್ತದಲ್ಲಿ ನಂಬಿಕೆಯಿಡುವ ಎಲ್ಲರನ್ನು ಆದಾಮನ ಪಾಪದಿಂದ ಮುಕ್ತಗೊಳಿಸುವನು. “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಹೌದು, ಮೆತೂಷೆಲಹನು ಜೀವಿಸಿದ್ದ 969 ವರ್ಷಗಳ ದೀರ್ಘಾಯುಷ್ಯವೂ ಅತಿ ಅಲ್ಪಾಯುಷ್ಯವಾಗಿ ಕಂಡುಬರುವ ಸಮಯವು ಬೇಗನೆ ಬರಲಿದೆ! (g 7/07)

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಸಂಪುಟ 2 ಪುಟ 1214 ನೋಡಿ.

[ಪುಟ 21ರಲ್ಲಿರುವ ನಕ್ಷೆ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

1000

ಮೆತೂಷೆಲಹ

ಆದಾಮ

ಸೇತ

900

 

 

 

800

 

 

 

700

 

 

 

600

 

 

 

500

 

 

 

400

 

 

 

300

 

 

 

200

 

 

 

100

ಇಂದು ಮನುಷ್ಯನ ಸರಾಸರಿ ಆಯುಸ್ಸು