ಬೈಬಲ್ ಅದರಲ್ಲೇನಿದೆ ಎಂದು ನೀವೇಕೆ ತಿಳಿಯಬೇಕು?
ಬೈಬಲ್ ಅದರಲ್ಲೇನಿದೆ ಎಂದು ನೀವೇಕೆ ತಿಳಿಯಬೇಕು?
● ಇತಿಹಾಸದಲ್ಲೇ ಹೆಚ್ಚು ವ್ಯಾಪಕವಾಗಿ ವಿತರಣೆಗೊಂಡ ಪುಸ್ತಕ ಬೈಬಲ್. ಅನೇಕರಿಗೆ ಅದು ಅಚ್ಚುಮೆಚ್ಚಿನ ಪುಸ್ತಕ. ಅದರ ಮೇಲೆ ಕೈಯಿಟ್ಟು ನ್ಯಾಯಾಲಯಗಳ ಕಟಕಟೆಯಲ್ಲಿರುವವರು ಆಣೆಯಿಡುತ್ತಾರೆ ಮತ್ತು ಕೆಲವು ದೇಶಗಳಲ್ಲಿ ಅಧಿಕಾರಿಗಳು ಪ್ರಮಾಣವಚನ ಸ್ವೀಕರಿಸುತ್ತಾರೆ. ಬೈಬಲಿನ ಜ್ಞಾನವು ಬೇರಾವುದೇ ಶಿಕ್ಷಣದಿಂದ ಸಿಗುವ ಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು.
ಹೆಚ್ಚೆಚ್ಚು ಜನರು ಬೈಬಲನ್ನು ಓದಿ ಅದರ ಪ್ರಕಾರ ನಡೆದರೆ ಈ ಜಗತ್ತು ಎಷ್ಟೋ ಉತ್ತಮವಾಗಿರುತ್ತಿತ್ತೆಂಬ ಮಾತನ್ನು ಅನೇಕರು ಸಮ್ಮತಿಸುವರು. ಬೈಬಲಿನ ಬೋಧನೆಗಳನ್ನು ತಿಳಿಯಲು ಬೈಬಲ್—ಅದರಲ್ಲಿ ಏನಿದೆ? ಎಂಬ 32 ಪುಟದ ಚಿತ್ರಗಳುಳ್ಳ ಬ್ರೋಷರ್ ನಿಮಗೆ ಸಹಾಯಮಾಡುವುದು. ಅದರ ಮೊದಲ ಎರಡು ಅಧ್ಯಾಯಗಳು ಸೃಷ್ಟಿಕರ್ತನು ಮಾನವರಿಗೆ ಕೊಟ್ಟ ಉದ್ಯಾನವನದಂಥ ಪರದೈಸಿನ ಬಗ್ಗೆ ಮತ್ತು ಅದನ್ನು ಅವರು ಕಳಕೊಂಡ ಬಗ್ಗೆ ತಿಳಿಸುತ್ತವೆ. ಮುಂದಿನ ಅಧ್ಯಾಯಗಳು, ಆ ಪರದೈಸನ್ನು ಭೂಮಿಗೆ ತರುವ ದೇವರ ರಾಜ್ಯ ಸರಕಾರದ ಅಧಿಪತಿಯು ಹುಟ್ಟಿಬಂದ ಜನಾಂಗದ ಇತಿಹಾಸದ ಬಗ್ಗೆ ಕಿರುನೋಟವನ್ನು ಕೊಡುತ್ತವೆ.
ಅನಂತರದ ಅಧ್ಯಾಯಗಳು ದೇವನೇಮಿತ ಅಧಿಪತಿಯಾದ ಯೇಸು ಕ್ರಿಸ್ತನ ಜೀವನ, ಶುಶ್ರೂಷೆ, ಅದ್ಭುತಗಳು, ಮರಣ ಮತ್ತು ಪುನರುತ್ಥಾನದ ಬಗ್ಗೆ ತಿಳಿಸುತ್ತವೆ. ಮುಂದಿನ ನಾಲ್ಕು ಅಧ್ಯಾಯಗಳು ಪ್ರಥಮ ಶತಮಾನದಲ್ಲಿದ್ದ ಕ್ರಿಸ್ತನ ಹಿಂಬಾಲಕರ ಶುಶ್ರೂಷೆ, ಹಿಂಸೆಗಳ ಮಧ್ಯೆ ಅವರ ನಂಬಿಗಸ್ತಿಕೆ, ದೇವರ ಪ್ರೇರಣೆಯಿಂದ ಅವರು ಬರೆದ ಬರಹಗಳ ಬಗ್ಗೆ ಕೌತುಕಭರಿತ ಇತಿಹಾಸವನ್ನು ಸಂಕ್ಷಿಪ್ತವಾಗಿ ವರ್ಣಿಸುತ್ತವೆ. “ಪರದೈಸ್ ಕೈಸೇರಿತು” ಎಂಬ ಅಧ್ಯಾಯವನ್ನು ಮತ್ತು ವರ್ಣರಂಜಿತ ಚಿತ್ರಗಳಿಂದ ಕೂಡಿರುವ “ಬೈಬಲ್ ಸಂದೇಶದ ಒಂದು ಕಿರುನೋಟ” ಎಂಬ ಶೀರ್ಷಿಕೆಯುಳ್ಳ ಕೊನೆ ಪುಟವನ್ನು ಓದಿ ನೀವು ಖಂಡಿತ ಹರ್ಷಿಸುವಿರಿ.
ಈ ಬ್ರೋಷರನ್ನು ಪಡೆದುಕೊಳ್ಳಲು ನೀವು ಇಷ್ಟಪಡುವಲ್ಲಿ ಕೆಳಗೆ ಕೊಡಲಾಗಿರುವ ಕೂಪನನ್ನು ಭರ್ತಿಮಾಡಿ ಈ ಪತ್ರಿಕೆಯ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಕಳುಹಿಸಿ. (g10-E 04)
❑ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಇಲ್ಲಿ ತೋರಿಸಲಾದ ಬ್ರೋಷರಿಗಾಗಿ ವಿನಂತಿಸಿಕೊಳ್ಳುತ್ತೇನೆ.
❑ ಉಚಿತ ಬೈಬಲಧ್ಯಯನ ಮಾಡುವುದಕ್ಕಾಗಿ ದಯಮಾಡಿ ನನ್ನನ್ನು ಸಂಪರ್ಕಿಸಿ.