ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯ ಹೊಸ ಸದಸ್ಯರು

ಆಡಳಿತ ಮಂಡಲಿಯ ಹೊಸ ಸದಸ್ಯರು

ಆಡಳಿತ ಮಂಡಲಿಯ ಹೊಸ ಸದಸ್ಯರು

ಪೆನ್ಸಿಲ್ವೇನಿಯದ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಅಕ್ಟೋಬರ್‌ 2, 1999ರ ಶನಿವಾರದಂದು ನಡೆದ ವಾರ್ಷಿಕ ಕೂಟವು, ಒಂದು ಅನಿರೀಕ್ಷಿತ ಪ್ರಕಟನೆಯೊಂದಿಗೆ ಮುಕ್ತಾಯಗೊಂಡಿತು. ಹಾಜರಿದ್ದ ಅಥವಾ ಟೆಲಿಫೋನ್‌ ಲೈನ್‌ಗಳ ಮೂಲಕ ಸಂಪರ್ಕಹೊಂದಿದ್ದ 10,594 ಮಂದಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಗೆ ನಾಲ್ಕು ಮಂದಿ ಹೊಸ ಸದಸ್ಯರನ್ನು ಕೂಡಿಸಲಾಗಿದೆ ಎಂಬುದನ್ನು ಕೇಳಿ ತುಂಬ ರೋಮಾಂಚಿತರಾದರು. ಈ ಹೊಸ ಸದಸ್ಯರೆಲ್ಲರೂ ಅಭಿಷಿಕ್ತ ಕ್ರೈಸ್ತರಾಗಿದ್ದು, ಸ್ಯಾಮ್ಯೆಲ್‌ ಎಫ್‌. ಹರ್ಡ್‌, ಎಮ್‌. ಸ್ಟೀವನ್‌ ಲೆಟ್‌, ಗೈ ಏಚ್‌. ಪಿಯರ್ಸ್‌, ಮತ್ತು ಡೇವಿಡ್‌ ಏಚ್‌. ಸ್ಪ್ಲೇನ್‌ ಎಂಬುವು ಅವರ ಹೆಸರುಗಳಾಗಿವೆ.

• ಸ್ಯಾಮ್ಯೆಲ್‌ ಹರ್ಡ್‌ ಅವರು 1958ರಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದರು, ಮತ್ತು 1965ರಿಂದ 1997ರ ತನಕ ಅವರು ಸರ್ಕಿಟ್‌ ಹಾಗೂ ಡಿಸ್ಟ್ರಿಕ್ಟ್‌ ಕೆಲಸದಲ್ಲಿದ್ದರು. ಅಂದಿನಿಂದ ಇವರು ಮತ್ತು ಇವರ ಪತ್ನಿಯಾದ ಗ್ಲೋರಿಯ ಅಮೆರಿಕದಲ್ಲಿರುವ ಬೆತೆಲ್‌ ಕುಟುಂಬದ ಸದಸ್ಯರಾಗಿದ್ದಾರೆ; ಇಲ್ಲಿ ಸಹೋದರ ಹರ್ಡ್‌ ಅವರು ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಸೇವೆಮಾಡುತ್ತಿದ್ದಾರೆ. ಇವರು ಸರ್ವಿಸ್‌ ಕಮಿಟಿಯ ಸಹಾಯಕರಾಗಿಯೂ ಕೆಲಸಮಾಡುತ್ತಿದ್ದರು.

• ಸ್ಟೀವನ್‌ ಲೆಟ್‌ ಅವರು 1966ರಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದರು, ಮತ್ತು 1967ರಿಂದ 1971ರ ತನಕ ಅಮೆರಿಕದ ಬೆತೆಲ್‌ನಲ್ಲಿ ಸೇವೆಮಾಡಿದರು. 1971ರ ಅಕ್ಟೋಬರ್‌ ತಿಂಗಳಿನಲ್ಲಿ ಅವರು ಸೂಸನ್‌ರನ್ನು ವಿವಾಹವಾಗಿ, ವಿಶೇಷ ಪಯನೀಯರ್‌ ಸೇವೆಯನ್ನು ಆರಂಭಿಸಿದರು. 1979ರಿಂದ 1998ರ ವರೆಗೆ ಒಬ್ಬ ಸರ್ಕಿಟ್‌ ಮೇಲ್ವಿಚಾರಕರಾಗಿ ಇವರು ಸೇವೆಮಾಡಿದರು. 1998ರ ಏಪ್ರಿಲ್‌ ತಿಂಗಳಿನಿಂದ, ಇವರು ಮತ್ತು ಸೂಸನ್‌ ಅಮೆರಿಕದ ಬೆತೆಲ್‌ ಕುಟುಂಬದ ಸದಸ್ಯರಾಗಿದ್ದಾರೆ. ಇಲ್ಲಿ ಈ ಸಹೋದರರು ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದ್ದಾರೆ ಮತ್ತು ಈ ಮುಂಚೆ ಟೀಚಿಂಗ್‌ ಕಮಿಟಿಗೆ ಸಹಾಯಕರಾಗಿ ಸೇವೆಮಾಡುತ್ತಿದ್ದರು.

• ಗೈ ಪಿಯರ್ಸ್‌ ಮಕ್ಕಳನ್ನು ಬೆಳೆಸಿ, ಸಮಯಾನಂತರ 1982ರ ಏಪ್ರಿಲ್‌ನಲ್ಲಿ ತಮ್ಮ ಪತ್ನಿಯೊಂದಿಗೆ ಪಯನೀಯರ್‌ ಸೇವೆಯನ್ನು ಆರಂಭಿಸಿದರು. 1986ರಿಂದ 1997ರ ತನಕ ಇವರು ಸರ್ಕಿಟ್‌ ಮೇಲ್ವಿಚಾರಕರಾಗಿ ಸೇವೆಮಾಡಿದರು. ಆದರೆ 1997ರಲ್ಲಿ ಇವರು ಹಾಗೂ ಇವರ ಪತ್ನಿಯಾದ ಪೆನಿಯವರು ಅಮೆರಿಕದ ಬೆತೆಲ್‌ ಕುಟುಂಬದ ಸದಸ್ಯರಾದರು. ಸಹೋದರ ಪಿಯರ್ಸ್‌ ಪರ್ಸನೆಲ್‌ ಕಮಿಟಿಗೆ ಸಹಾಯಕರಾಗಿ ಸೇವೆಮಾಡುತ್ತಿದ್ದರು.

• ಡೇವಿಡ್‌ ಸ್ಪ್ಲೇನ್‌ ಅವರು 1963ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದರು. 42ನೆಯ ಗಿಲ್ಯಡ್‌ ಕ್ಲಾಸಿನಿಂದ ಪದವಿಪಡೆದುಕೊಂಡಿದ್ದ ಇವರು ಆಫ್ರಿಕದ ಸೆನಿಗಾಲ್‌ನಲ್ಲಿ ಮಿಷನೆರಿಯಾಗಿ ಸೇವೆಮಾಡಿದರು. ಆನಂತರ 19 ವರ್ಷಗಳ ವರೆಗೆ ಕೆನಡದಲ್ಲಿ ಸರ್ಕಿಟ್‌ ಕೆಲಸವನ್ನು ಮಾಡಿದರು. 1990ರಿಂದ ಇವರು ಹಾಗೂ ಇವರ ಪತ್ನಿಯಾದ ಲಿಂಡ ಅಮೆರಿಕದಲ್ಲಿರುವ ಬೆತೆಲ್‌ನಲ್ಲಿದ್ದಾರೆ; ಇಲ್ಲಿ ಸಹೋದರ ಸ್ಪ್ಲೇನ್‌ ಅವರು ಸರ್ವಿಸ್‌ ಮತ್ತು ರೈಟಿಂಗ್‌ ಡಿಪಾರ್ಟ್‌ಮೆಂಟ್‌ಗಳಲ್ಲಿ ಸೇವೆಮಾಡಿದ್ದಾರೆ. 1998ರಿಂದ ಇವರು ರೈಟಿಂಗ್‌ ಕಮಿಟಿಯ ಸಹಾಯಕರೂ ಆಗಿದ್ದಾರೆ.

ನಾಲ್ಕು ಹೊಸ ಸದಸ್ಯರ ಜೊತೆಗೆ, ಈಗ ಆಡಳಿತ ಮಂಡಲಿಯಲ್ಲಿ ಸಿ. ಡಬ್ಲ್ಯೂ. ಬಾರ್ಬರ್‌, ಜೆ. ಇ. ಬಾರ್‌, ಎಮ್‌. ಜಿ. ಹೆನ್ಶೆಲ್‌, ಜಿ. ಲಾಶ್‌, ಟಿ. ಜಾರಸ್‌, ಕೆ. ಎಫ್‌. ಕ್ಲೈನ್‌, ಏ. ಡಿ. ಶ್ರೋಡರ್‌, ಎಲ್‌. ಏ. ಸ್ವಿಂಗಲ್‌, ಮತ್ತು ಡಿ. ಸಿಡ್ಲಿಕ್‌ರು ಇದ್ದಾರೆ. ಈಗ ದೊಡ್ಡದಾಗಿರುವ ಈ ಆಡಳಿತ ಮಂಡಲಿಯು, ಲೋಕವ್ಯಾಪಕವಾಗಿರುವ ದೇವಜನರ ಚಟುವಟಿಕೆಯ ಮೇಲ್ವಿಚಾರಣೆ ಮಾಡುತ್ತಾ, ಅವರ ಆತ್ಮಿಕ ಅಭಿರುಚಿಗಳನ್ನು ಪೂರೈಸುತ್ತಾ ಮುಂದುವರಿಯುತ್ತಿರುವಾಗ, ಈ ಮಂಡಲಿಯನ್ನು ಯೆಹೋವನು ಆಶೀರ್ವದಿಸುತ್ತಾ ಮತ್ತು ಬಲಪಡಿಸುತ್ತಾ ಇರಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆಯಾಗಿದೆ.