ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಎದುರುಗಾಳಿ ಬೀಸುತ್ತಿರುವಾಗ’

‘ಎದುರುಗಾಳಿ ಬೀಸುತ್ತಿರುವಾಗ’

‘ಎದುರುಗಾಳಿ ಬೀಸುತ್ತಿರುವಾಗ’

ಯೇಸು ಕ್ರಿಸ್ತನ ಶಿಷ್ಯರು ದೋಣಿಯಲ್ಲಿ ಗಲಿಲಾಯ ಸಮುದ್ರವನ್ನು ದಾಟಲು ಹೆಣಗಾಡುತ್ತಿದ್ದಾಗ, ಅವರ ನೈಜ ಅನುಭವವನ್ನು ವರ್ಣಿಸುತ್ತಾ ಸುವಾರ್ತಾ ಲೇಖಕನಾದ ಮಾರ್ಕನು “ಎದುರುಗಾಳಿ ಬೀಸುತ್ತಿದ್ದದರಿಂದ ಶಿಷ್ಯರು ಹುಟ್ಟು ಹಾಕಿ ಹಾಕಿ ಒದ್ದಾಡು”ತ್ತಿದ್ದರು ಎಂದು ಹೇಳಿದನು. ಯೇಸು ದಡದಲ್ಲೇ ನಿಂತುಕೊಂಡು ಶಿಷ್ಯರ ಅವಸ್ಥೆಯನ್ನು ನೋಡಿದನು ಮತ್ತು ಅವರ ಬಳಿಗೆ ಹೋಗಲಿಕ್ಕಾಗಿ ಅದ್ಭುತಕರವಾದ ರೀತಿಯಲ್ಲಿ ಸಮುದ್ರದ ಮೇಲೆ ನಡೆದುಹೋದನು. “ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬಂದ ಮೇಲೆ ಗಾಳಿ ನಿಂತುಹೋಯಿತು.”—ಮಾರ್ಕ 6:48-51.

ಈ ಘಟನೆಗೆ ಮುಂಚೆ ಒಂದು ಸಂದರ್ಭದಲ್ಲಿ ‘ದೊಡ್ಡ ಬಿರುಗಾಳಿಯು ಎದ್ದಿತ್ತು’ ಎಂದು ಅದೇ ಬೈಬಲ್‌ ಬರಹಗಾರನು ವರದಿಸಿದನು. ಆ ಸಮಯದಲ್ಲಿ ಯೇಸು “ಗಾಳಿಯನ್ನು ಗದರಿಸಿ ಸಮುದ್ರಕ್ಕೆ—ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು. ಕೊಡುತ್ತಲೆ ಗಾಳಿ ನಿಂತು ಹೋಗಿ ಎಲ್ಲಾ ಶಾಂತವಾಯಿತು.”—ಮಾರ್ಕ 4:37-39.

ಇಂದು ನಮಗೆ ಅಂತಹ ಅದ್ಭುತ ಘಟನೆಗಳನ್ನು ಕಣ್ಣಾರೆ ಕಾಣುವ ಸುಯೋಗವು ಇಲ್ಲದಿರುವುದಾದರೂ, ಅವುಗಳಿಂದ ಬಹಳಷ್ಟು ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ. ಅಪಾಯಕರವಾದ ಸಮಯಗಳಲ್ಲಿ ಜೀವಿಸುತ್ತಿರುವ ಅಪರಿಪೂರ್ಣ ಮಾನವರೋಪಾದಿ ನಾವು, ಸಂಕಷ್ಟದ ಬಿರುಗಾಳಿಗೆ ಒಳಗಾಗುತ್ತೇವೆ. (2 ತಿಮೊಥೆಯ 3:1-5) ವಾಸ್ತವದಲ್ಲಿ, ಕೆಲವೊಮ್ಮೆ ವೈಯಕ್ತಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಂಕಟವು ಬಿರುಗಾಳಿಯಷ್ಟು ತೀವ್ರವಾಗುತ್ತಿದೆ ಎಂದು ನಮಗನಿಸಬಹುದು. ಆದರೆ ಉಪಶಮನವು ಲಭ್ಯವಿದೆ! ಯೇಸು ಈ ಆಮಂತ್ರಣವನ್ನು ನಮಗೆ ಕೊಡುತ್ತಾನೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.”—ಮತ್ತಾಯ 11:28.

‘ಎದುರುಗಾಳಿ ಬೀಸುತ್ತಿದೆ’ ಎಂದು ನಮಗೆ ಅನಿಸುವಾಗ, ನಾವು ಮನಸ್ಸಿನಲ್ಲಿ “ಶಾಂತಿ”ಯನ್ನು ಅನುಭವಿಸಸಾಧ್ಯವಿದೆ. ಹೇಗೆ? ಯೆಹೋವ ದೇವರ ನಿಶ್ಚಿತ ವಾಗ್ದಾನಗಳಲ್ಲಿ ಭರವಸೆಯನ್ನು ಇಡುವ ಮೂಲಕವೇ.—ಹೋಲಿಸಿರಿ ಯೆಶಾಯ 55:9-11; ಫಿಲಿಪ್ಪಿ 4:5-7.