ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ನಿಮ್ಮೊಂದಿಗೆ ಪ್ರತಿದಿನ ಮಾತಾಡುವಂತೆ ಬಿಡುತ್ತೀರೋ?

ದೇವರು ನಿಮ್ಮೊಂದಿಗೆ ಪ್ರತಿದಿನ ಮಾತಾಡುವಂತೆ ಬಿಡುತ್ತೀರೋ?

ದೇವರು ನಿಮ್ಮೊಂದಿಗೆ ಪ್ರತಿದಿನ ಮಾತಾಡುವಂತೆ ಬಿಡುತ್ತೀರೋ?

ನೀವು ಕನ್ನಡಿ ನೋಡುತ್ತೀರೋ? ನಮ್ಮಲ್ಲಿ ಹೆಚ್ಚಿನವರಿಗೆ ಇದೊಂದು ನಿತ್ಯದ ರೂಢಿಯಾಗಿದ್ದು ಬಹುಶಃ ಅವಕಾಶ ಸಿಕ್ಕಿದಾಗಲ್ಲೆಲ್ಲ ನೋಡುತ್ತಿರುತ್ತೇವೆ. ಏಕೆ? ನಾವು ಅಂದಚೆಂದವಾಗಿ ಕಾಣಬೇಕಲ್ಲವೇ ಅದಕ್ಕೆ.

ಬೈಬಲನ್ನು ಓದುವುದು ಕನ್ನಡಿ ನೋಡುವಂತೆ ಇದೆ. (ಯಾಕೋಬ 1:23-25) ಬೈಬಲಲ್ಲಿರುವ ವಿಷಯವು ನಾವು ನಿಜವಾಗಿಯೂ ಎಂಥ ವ್ಯಕ್ತಿಯಾಗಿದ್ದೇವೆ ಎಂದು ತಿಳಿಯಲು ನಮಗೆ ಸಹಾಯಮಾಡುತ್ತದೆ. ಅದು ‘ಪ್ರಾಣಮನಸ್ಸುಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ತೂರಿಹೋಗುವಂಥದ್ದು.’ (ಇಬ್ರಿಯ 4:12) ಅಂದರೆ ಹೊರಗೆ ಹೇಗೆ ತೋರಿಸಿಕೊಳ್ಳುತ್ತೇವೆ ಮತ್ತು ಒಳಗೆ ಅಂತರಂಗದಲ್ಲಿ ನಿಜವಾಗಿ ಹೇಗಿದ್ದೇವೆ ಎಂಬುದನ್ನು ವಿಭಾಗಿಸುತ್ತದೆ. ಬೈಬಲ್‌ ಒಂದು ಕನ್ನಡಿಯಂತೆ ನಾವು ನಮ್ಮನ್ನೇ ಎಲ್ಲೆಲ್ಲಿ ಸರಿಪಡಿಸಿಕೊಳ್ಳಬೇಕೆಂದು ತೋರಿಸಿಕೊಡುತ್ತದೆ.

ಅಷ್ಟುಮಾತ್ರವಲ್ಲದೆ ನಾವು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನೂ ಬೈಬಲ್‌ ತಿಳಿಸುತ್ತದೆ. “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿದೆ” ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:16, 17) ಇಲ್ಲಿ ನಾಲ್ಕು ಉಪಯುಕ್ತ ಅಂಶಗಳನ್ನು ತಿಳಿಸಲಾಗಿದೆ. ಗಮನಿಸಿ: ಖಂಡಿಸು, ವಿಷಯಗಳನ್ನು ಸರಿಪಡಿಸು, ನೀತಿಯಲ್ಲಿ ಶಿಸ್ತುಗೊಳಿಸು ಎಂಬ ಮೂರು ಅಂಶಗಳು ನಮ್ಮ ಮನೋಭಾವ ಮತ್ತು ಕೃತ್ಯಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿವೆ. ಅಂದವಾಗಿ ತೋರಲು ನಾವು ಪ್ರತಿದಿನ ಕನ್ನಡಿಯನ್ನು ನೋಡುತ್ತೇವಾದರೆ, ಪ್ರತಿದಿನ ದೇವರ ವಾಕ್ಯವಾದ ಬೈಬಲನ್ನು ಓದುವುದು ಇನ್ನೆಷ್ಟು ಹೆಚ್ಚು ಮಹತ್ತ್ವದ್ದು!

ಇಸ್ರಾಯೇಲ್‌ ಜನಾಂಗವನ್ನು ಮುನ್ನಡೆಸಲು ಯೆಹೋವ ದೇವರು ಯೆಹೋಶುವನನ್ನು ನೇಮಿಸಿದ ಬಳಿಕ ಹೇಳಿದ್ದು: “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” (ಯೆಹೋಶುವ 1:8) ಹೌದು, ಯೆಹೋಶುವನು ಸಫಲನಾಗಬೇಕಾದರೆ ದೇವರ ವಾಕ್ಯವನ್ನು “ಹಗಲಿರುಳು” ಅಂದರೆ ಕ್ರಮವಾಗಿ ಓದಬೇಕಾಗಿತ್ತು.

ಬೈಬಲನ್ನು ಕ್ರಮವಾಗಿ ಓದುವುದರ ಪ್ರಯೋಜನಗಳನ್ನು ಮೊದಲನೇ ಕೀರ್ತನೆ ಕೂಡ ತಿಳಿಸುತ್ತದೆ. ಅದನ್ನುವುದು: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:1-3) ಖಂಡಿತವಾಗಿ ನಾವು ಕೂಡ ಇಂಥ ವ್ಯಕ್ತಿಯಂತಾಗಲು ಬಯಸುತ್ತೇವೆ.

ಅನೇಕರು ಬೈಬಲನ್ನು ಪ್ರತಿನಿತ್ಯ ಓದುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಬೈಬಲನ್ನು ಪ್ರತಿದಿನ ಯಾಕೆ ಓದುತ್ತೀರಿ ಎಂದು ಒಬ್ಬ ಕ್ರೈಸ್ತನನ್ನು ಕೇಳಿದಾಗ, “ನಾನು ದಿನಕ್ಕೆ ಎಷ್ಟೋ ಸಲ ದೇವರಿಗೆ ಪ್ರಾರ್ಥಿಸುತ್ತೇನೆ ಮತ್ತು ಆತನು ನನ್ನ ಮಾತನ್ನು ಆಲಿಸಬೇಕೆಂದು ನಿರೀಕ್ಷಿಸುತ್ತೇನೆ. ಹೀಗಿರುವಾಗ ಪ್ರತಿದಿನ ಬೈಬಲನ್ನು ಓದುವ ಮೂಲಕ ನಾನು ಸಹ ದೇವರ ಮಾತುಗಳನ್ನು ಆಲಿಸಬೇಕಲ್ಲವೇ? ಇಡೀ ಹೊತ್ತು ನಾವೇ ಮಾತಾಡುತ್ತಾ ಇದ್ದರೆ ನಾವು ಒಳ್ಳೇ ಸ್ನೇಹಿತರಾಗಿರುವುದು ಹೇಗೆ?” ಎಂದು ಅವರು ಹೇಳಿದರು. ಅವರ ಮಾತಿನಲ್ಲಿ ಹುರುಳಿದೆ. ನಾವು ಬೈಬಲನ್ನು ಓದುವಾಗ ದೇವರು ಮಾತಾಡುವುದನ್ನು ಕೇಳುತ್ತಿದ್ದೇವೆ ಎಂದರ್ಥ. ಬೇರೆ ಬೇರೆ ವಿಷಯಗಳ ಬಗ್ಗೆ ಆತನ ದೃಷ್ಟಿಕೋನವೇನೆಂದು ನಾವು ತಿಳಿಯಬಲ್ಲೆವು.

ಬೈಬಲ್‌ ಓದಲಿಕ್ಕಾಗಿ ಶೆಡ್ಯೂಲ್‌

ನೀವು ಈಗಾಗಲೇ ಬೈಬಲನ್ನು ಕ್ರಮಬದ್ಧವಾಗಿ ಓದಲು ಪ್ರಾರಂಭಿಸಿರಬಹುದು. ಇಡೀ ಬೈಬಲನ್ನು ಓದಿ ಮುಗಿಸಿದ್ದೀರಾ? ಹೀಗೆ ಬೈಬಲನ್ನು ಮೊದಲ ಪುಟದಿಂದ ಕೊನೆ ಪುಟದ ವರೆಗೆ ಓದುವುದು ತಾನೇ ಬೈಬಲಿನ ಸುಪರಿಚಯ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗ. ಕೆಲವರು ಇಡೀ ಬೈಬಲನ್ನು ಓದಬೇಕೆನ್ನುವ ಉದ್ದೇಶದಿಂದ ಅದನ್ನು ಅನೇಕ ಬಾರಿ ಓದಲು ಪ್ರಾರಂಭಿಸಿ ಆಮೇಲೆ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ನಿಮಗೂ ಇದೇ ಸಮಸ್ಯೆ ಇದೆಯೋ? ಇಡೀ ಬೈಬಲನ್ನು ಓದುವ ಗುರಿ ಮುಟ್ಟಲು ನೀವೇನು ಮಾಡಬಹುದು? ಮುಂದೆ ಕೊಡಲಾದ ಎರಡು ಸಲಹೆಗಳನ್ನು ನೀವೇಕೆ ಪ್ರಯತ್ನಿಸಿ ನೋಡಬಾರದು?

ನಿಮ್ಮ ದಿನಚರಿಯಲ್ಲಿ ಬೈಬಲ್‌ ಓದಲು ಸಮಯ ಬದಿಗಿರಿಸಿ. ನಿಮಗೆ ಬೈಬಲ್‌ ಓದಲು ಸಾಧ್ಯವಾಗುವ ಒಂದು ಸಮಯವನ್ನು ಆರಿಸಿ. ಆ ಸಮಯದಲ್ಲಿ ಬೈಬಲನ್ನು ಓದಲು ಆಗದಂಥ ಸಂದರ್ಭಗಳಿಗೆಂದೇ ಇನ್ನೊಂದು ಸಮಯವನ್ನೂ ಗೊತ್ತುಮಾಡಿ. ಹೀಗೆ ನಿಮಗೆ ಒಂದು ದಿನವೂ ತಪ್ಪದೆ ಬೈಬಲನ್ನು ಓದಲಿಕ್ಕಾಗುವುದು. ಈ ರೀತಿಯಲ್ಲಿ ನೀವು ಪ್ರಾಚೀನಕಾಲದ ಬೆರೋಯ ಎಂಬ ಪಟ್ಟಣದ ಜನರನ್ನು ಅನುಕರಿಸುವಿರಿ. ಅವರ ಬಗ್ಗೆ ಬೈಬಲ್‌ ಹೀಗನ್ನುತ್ತದೆ: “ಅವರು ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ ಈ ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.”—ಅ. ಕಾರ್ಯಗಳು 17:11.

ಒಂದು ನಿರ್ದಿಷ್ಟ ಗುರಿಯಿರಲಿ. ಉದಾಹರಣೆಗೆ ನೀವು ಪ್ರತಿದಿನ 3-5 ಅಧ್ಯಾಯಗಳನ್ನು ಓದಿದರೆ ಇಡೀ ಬೈಬಲನ್ನು ಬರೇ ಒಂದು ವರ್ಷದಲ್ಲಿ ಓದಿ ಮುಗಿಸುವಿರಿ. ಇದನ್ನು ಹೇಗೆ ಮಾಡುವುದೆಂದು ಮುಂದಿನ ಪುಟಗಳಲ್ಲಿರುವ ಚಾರ್ಟ್‌ ನಿಮಗೆ ತೋರಿಸುವುದು. ಈ ಚಾರ್ಟ್‌ಗನುಸಾರ ಬೈಬಲ್‌ ಓದಲು ನಿಶ್ಚಯಿಸಬಾರದೇಕೆ? ಕೊಡಲಾಗಿರುವ ಅಧ್ಯಾಯಗಳನ್ನು ಯಾವಾಗ ಓದುವಿರೆಂದು “ದಿನಾಂಕ” ಎಂಬ ಕಾಲಮ್‌ನಲ್ಲಿ ಬರೆಯಿರಿ. ಅವುಗಳನ್ನು ಓದುತ್ತಾ ಹೋದಂತೆ ಪಕ್ಕದಲ್ಲಿರುವ ಬಾಕ್ಸ್‌ಗಳಲ್ಲಿ ಗುರುತುಹಾಕಿ. ಹೀಗೆ ಮಾಡುವುದರಿಂದ ನೀವೆಲ್ಲಿಯ ತನಕ ಓದಿದ್ದೀರೆಂದು ತಿಳಿಯುತ್ತದೆ.

ಒಮ್ಮೆ ನೀವು ಬೈಬಲನ್ನು ಪೂರ್ತಿಯಾಗಿ ಓದಿ ಮುಗಿಸಿದರೆ ಅಲ್ಲಿಗೆ ನಿಲ್ಲಿಸಬೇಡಿ. ಅದೇ ಚಾರ್ಟನ್ನು ಉಪಯೋಗಿಸಿ ಪ್ರತಿವರ್ಷವೂ ಇಡೀ ಬೈಬಲನ್ನು ಓದಬಹುದು. ಪ್ರತಿಸಲ ಬೇರೆ ಬೇರೆ ವಿಭಾಗದಿಂದ ನೀವದನ್ನು ಪ್ರಾರಂಭಿಸಬಹುದು. ನಿಧಾನವಾಗಿ ಓದಲು ಇಷ್ಟಪಡುವುದಾದರೆ ಒಂದು ದಿನಕ್ಕಿರುವ ಅಧ್ಯಾಯಗಳನ್ನು ಓದಲು 2-3 ದಿನಗಳನ್ನು ತೆಗೆದುಕೊಳ್ಳಬಹುದು.

ಪ್ರತಿಸಲವೂ ನೀವು ಬೈಬಲನ್ನು ಓದುವಾಗ ಹಿಂದೆಂದೂ ಗಮನಿಸಿರದ, ನಿಮ್ಮ ಜೀವನಕ್ಕೆ ಅನ್ವಯವಾಗುವ ಹೊಸ ಹೊಸ ವಿಷಯಗಳನ್ನು ಕಂಡುಕೊಳ್ಳುವಿರಿ. ಏಕೆ? ಏಕೆಂದರೆ “ಈ ಲೋಕದ ದೃಶ್ಯವು ಮಾರ್ಪಡುತ್ತಾ ಇದೆ” ಮತ್ತು ಅದೇ ಸಮಯದಲ್ಲಿ ನಮ್ಮ ಜೀವನ, ಪರಿಸ್ಥಿತಿಗಳೂ ಬದಲಾಗುತ್ತಾ ಇರುತ್ತವೆ. (1 ಕೊರಿಂಥ 7:31) ದೇವರ ವಾಕ್ಯವಾದ ಬೈಬಲ್‌ ಎಂಬ ಕನ್ನಡಿಯಲ್ಲಿ ದಿನದಿನವೂ ನೋಡುವ ದೃಢಸಂಕಲ್ಪ ನಿಮಗಿರಲಿ. ಹೀಗೆ ಮಾಡುವಾಗ ದೇವರು ನಿಮ್ಮೊಂದಿಗೆ ಪ್ರತಿದಿನವೂ ಮಾತಾಡುವಂತೆ ಬಿಡುತ್ತೀರಿ.—ಕೀರ್ತನೆ 16:8. (w09 08/01)

[ಪುಟ 23ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

1

ಬೈಬಲ್‌ ಓದುವಿಕೆ ಶೆ ಡ್ಯೂ ಲ್‌

ಸೂಚನೆಗಳು. ಒಂದು ದಿನಕ್ಕೆ ಕೊಡಲಾಗಿರುವ ಅಧ್ಯಾಯಗಳನ್ನು ಯಾವ ದಿನ ಓದುವಿರೆಂದು ‘ದಿನಾಂಕ’ ಕಾಲಮ್‌ನಲ್ಲಿ ಬರೆಯಿರಿ. ಓದಿದ ಬಳಿಕ ಚೌಕದಲ್ಲಿ ಟಿಕ್‌ ಮಾಡಿ. ಬೈಬಲ್‌ ಪುಸ್ತಕಗಳನ್ನು ಕ್ರಮಾನುಸಾರ ಓದಬಹುದು ಅಥವಾ ವಿಷಯಕ್ಕನುಸಾರ ಇರುವ ವಿಭಾಗಗಳಲ್ಲಿ ಒಂದೊಂದನ್ನು ಆರಿಸಿ ಓದಬಹುದು. ಪ್ರತಿದಿನ ಸೂಚಿಸಲಾಗಿರುವಷ್ಟು ಅಧ್ಯಾಯಗಳನ್ನು ನೀವು ಓದಿದರೆ ಇಡೀ ಬೈಬಲನ್ನು ಒಂದು ವರ್ಷದಲ್ಲಿ ಓದಿ ಮುಗಿಸಬಹುದು.

◆ ಹಿಂದೆ ಇಸ್ರಾಯೇಲ್ಯರೊಂದಿಗೆ ದೇವರು ಹೇಗೆ ವ್ಯವಹರಿಸಿದನೆಂದು ತಿಳಿಯಬೇಕೋ? ಕೆಂಪು ಡಯಮಂಡ್‌ ಆಕಾರದ ಗುರುತಿರುವ ಅಧ್ಯಾಯಗಳನ್ನು ಓದಿ.

● ಕ್ರೈಸ್ತ ಸಭೆಯ ಬೆಳವಣಿಗೆಯ ಕಾಲಾನುಕ್ರಮವನ್ನು ತಿಳಿಯಬೇಕೋ? ನೀಲಿ ಬಿಂದುವಿನ ಗುರುತಿರುವ ಅಧ್ಯಾಯಗಳನ್ನು ಓದಿ.

2

ಮೋಶೆಯ ಬರಹಗಳು

ದಿನಾಂಕ ಅಧ್ಯಾಯ □✔

/ ಆದಿಕಾಂಡ 1-3 □

/ 4-7 □

/ 8-11 □

/ 12-15 □

/ 16-18 □

/ 19-22 □

/ 23-24 □

/ 25-27 □

/ 28-30 □

/ 31-32 □

/ 33-34 □

/ 35-37 □

/ 38-40 □

/ 41-42 □

/ 43-45 □

/ 46-48 □

/ 49-50 □

/ ವಿಮೋಚನಕಾಂಡ 1-4 □

/ 5-7 □

/ 8-10 □

/ 11-13 □

/ 14-15 □

/ 16-18 □

/ 19-21 □

/ 22-25 □

/ 26-28 □

/ 29-30 □

/ 31-33 □

/ 34-35 □

/ 36-38 □

/ 39-40 □

/ ಯಾಜಕಕಾಂಡ 1-4 □

/ 5-7 □

/ 8-10 □

/ 11-13 □

/ 14-15 □

/ 16-18 □

/ 19-21 □

/ 22-23 □

/ 24-25 □

/ 26-27 □

/ ಅರಣ್ಯಕಾಂಡ 1-3 □

/ 4-6 □

/ 7-9 □

/ 10-12 □

/ 13-15 □

/ 16-18 □

/ 19-21 □

/ 22-24 □

/ 25-27 □

/ 28-30 □

/ 31-32 □

/ 33-36 □

/ ಧರ್ಮೋಪದೇಶಕಾಂಡ 1-2 □

/ 3-4 □

/ 5-7 □

/ 8-10 □

/ 11-13 □

3

/ 14-16 □

/ 17-19 □

/ 20-22 □

/ 23-26 □

/ 27-28 □

/ 29-31 □

/ 32 □

/ 33-34 □

ವಾಗ್ದತ್ತ ದೇಶಕ್ಕೆ ಇಸ್ರಾಯೇಲ್‌ ಜನಾಂಗದ ಪ್ರವೇಶ

ದಿನಾಂಕ ಅಧ್ಯಾಯ □✔

/ ಯೆಹೋಶುವ 1-4 □

/ 5-7 □

/ 8-9 □

/ 10-12 □

/ 13-15 □

/ 16-18 □

/ 19-21 □

/ 22-24 □

/ ನ್ಯಾಯಸ್ಥಾಪಕರು 1-2 □

/ 3-5 □

/ 6-7 □

/ 8-9 □

/ 10-11 □

/ 12-13 □

/ 14-16 □

/ 17-19 □

/ 20-21 □

/ ರೂತ 1-4 □

ಇಸ್ರಾಯೇಲ್‌ನಲ್ಲಿ ಅರಸರ ಆಳ್ವಿಕೆ

ದಿನಾಂಕ ಅಧ್ಯಾಯ □✔

/ 1 ಸಮುವೇಲ 1-2 □

/ 3-6 □

/ 7-9 □

/ 10-12 □

/ 13-14 □

/ 15-16 □

/ 17-18 □

/ 19-21 □

/ 22-24 □

/ 25-27 □

/ 28-31 □

/ 2 ಸಮುವೇಲ 1-2 □

/ 3-5 □

/ 6-8 □

/ 9-12 □

/ 13-14 □

/ 15-16 □

/ 17-18 □

/ 19-20 □

/ 21-22 □

/ 23-24 □

/ 1 ಅರಸುಗಳು 1-2 □

/ 3-5 □

/ 6-7 □

/ 8 □

/ 9-10 □

/ 11-12 □

4

/ 1 ಅರಸುಗಳು (ಮುಂದುವರಿದಿದೆ) 13-14 □

/ 15-17 □

/ 18-19 □

/ 20-21 □

/ 22 □

/ 2 ಅರಸುಗಳು 1-3 □

/ 4-5 □

/ 6-8 □

/ 9-10 □

/ 11-13 □

/ 14-15 □

/ 16-17 □

/ 18-19 □

/ 20-22 □

/ 23-25 □

/ 1 ಪೂರ್ವಕಾಲವೃತ್ತಾಂತ 1-2 □

/ 3-5 □

/ 6-7 □

/ 8-10 □

/ 11-12 □

/ 13-15 □

/ 16-17 □

/ 18-20 □

/ 21-23 □

/ 24-26 □

/ 27-29 □

/ 2 ಪೂರ್ವಕಾಲವೃತ್ತಾಂತ 1-3 □

/ 4-6 □

/ 7-9 □

/ 10-14 □

/ 15-18 □

/ 19-22 □

/ 23-25 □

/ 26-28 □

/ 29-30 □

/ 31-33 □

/ 34-36 □

ಸೆರೆವಾಸದಿಂದ ಯೆಹೂದ್ಯರ ಹಿಂದಿರುಗುವಿಕೆ

ದಿನಾಂಕ ಅಧ್ಯಾಯ □✔

/ ಎಜ್ರ 1-3 □

/ 4-7 □

/ 8-10 □

/ ನೆಹೆಮೀಯ 1-3 □

/ 4-6 □

/ 7-8 □

/ 9-10 □

/ 11-13 □

/ ಎಸ್ತೇರ 1-4 □

/ 5-10 □

ಮೋಶೆಯ ಬರಹಗಳು

ದಿನಾಂಕ ಅಧ್ಯಾಯ □✔

/ ಯೋಬ 1-5 □

/ 6-9 □

/ 10-14 □

/ 15-18 □

/ 19-20 □

5

/ 21-24 □

/ 25-29 □

/ 30-31 □

/ 32-34 □

/ 35-38 □

/ 39-42 □

ಗೀತೆ ಹಾಗೂ ಪ್ರಾಯೋಗಿಕ ವಿವೇಕದ ಪುಸ್ತಕಗಳು

ದಿನಾಂಕ ಅಧ್ಯಾಯ □✔

/ ಕೀರ್ತನೆ 1-8 □

/ 9-16 □

/ 17-19 □

/ 20-25 □

/ 26-31 □

/ 32-35 □

/ 36-38 □

/ 39-42 □

/ 43-47 □

/ 48-52 □

/ 53-58 □

/ 59-64 □

/ 65-68 □

/ 69-72 □

/ 73-77 □

/ 78-79 □

/ 80-86 □

/ 87-90 □

/ 91-96 □

/ 97-103 □

/ 104-105 □

/ 106-108 □

/ 109-115 □

/ 116-119:63 □

/ 119:64-176 □

/ 120-129 □

/ 130-138 □

/ 139-144 □

/ 145-150 □

/ ಜ್ಞಾನೋಕ್ತಿ 1-4 □

/ 5-8 □

/ 9-12 □

/ 13-16 □

/ 17-19 □

/ 20-22 □

/ 23-27 □

/ 28-31 □

/ ಪ್ರಸಂಗಿ 1-4 □

/ 5-8 □

/ 9-12 □

/ ಪರಮಗೀತ 1-8 □

ಪ್ರವಾದಿಗಳು

ದಿನಾಂಕ ಅಧ್ಯಾಯ □✔

/ ಯೆಶಾಯ 1-4 □

/ 5-7 □

/ 8-10 □

6

/ ಯೆಶಾಯ (ಮುಂದುವರಿದಿದೆ) 11-14 □

/ 15-19 □

/ 20-24 □

/ 25-28 □

/ 29-31 □

/ 32-35 □

/ 36-37 □

/ 38-40 □

/ 41-43 □

/ 44-47 □

/ 48-50 □

/ 51-55 □

/ 56-58 □

/ 59-62 □

/ 63-66 □

/ ಯೆರೆಮೀಯ 1-3 □

/ 4-5 □

/ 6-7 □

/ 8-10 □

/ 11-13 □

/ 14-16 □

/ 17-20 □

/ 21-23 □

/ 24-26 □

/ 27-29 □

/ 30-31 □

/ 32-33 □

/ 34-36 □

/ 37-39 □

/ 40-42 □

/ 43-44 □

/ 45-48 □

/ 49-50 □

/ 51-52 □

/ ಪ್ರಲಾಪಗಳು 1-2 □

/ 3-5 □

/ ಯೆಹೆಜ್ಕೇಲ 1-3 □

/ 4-6 □

/ 7-9 □

/ 10-12 □

/ 13-15 □

/ 16 □

/ 17-18 □

/ 19-21 □

/ 22-23 □

/ 24-26 □

/ 27-28 □

/ 29-31 □

/ 32-33 □

/ 34-36 □

/ 37-38 □

/ 39-40 □

/ 41-43 □

/ 44-45 □

/ 46-48 □

/ ದಾನಿಯೇಲ 1-2 □

/ 3-4 □

/ 5-7 □

/ 8-10 □

/ 11-12 □

7

/ ಹೋಶೇಯ 1-7 □

/ 8-14 □

/ ಯೋವೇಲ 1-3 □

/ ಆಮೋಸ 1-5 □

/ 6-9 □

/ ಓಬದ್ಯ/ಯೋನ □

/ ಮೀಕ 1-7 □

/ ನಹೂಮ/ಹಬಕ್ಕೂಕ □

/ ಚೆಫನ್ಯ/ಹಗ್ಗಾಯ □

/ ಜೆಕರ್ಯ 1-7 □

/ 8-11 □

/ 12-14 □

/ ಮಲಾಕಿಯ 1-4 □

ಯೇಸುವಿನ ಜೀವನ ಹಾಗೂ ಶುಶ್ರೂಷೆಯ ವೃತ್ತಾಂತಗಳು

ದಿನಾಂಕ ಅಧ್ಯಾಯ □✔

/ ಮತ್ತಾಯ 1-4 □

/ 5-7 □

/ 8-10 □

/ 11-13 □

/ 14-17 □

/ 18-20 □

/ 21-23 □

/ 24-25 □

/ 26 □

/ 27-28 □

/ ಮಾರ್ಕ 1-3 □

/ 4-5 □

/ 6-8 □

/ 9-10 □

/ 11-13 □

/ 14-16 □

/ ಲೂಕ 1-2 □

/ 3-5 □

/ 6-7 □

/ 8-9 □

/ 10-11 □

/ 12-13 □

/ 14-17 □

/ 18-19 □

/ 20-22 □

/ 23-24 □

/ ಯೋಹಾನ 1-3 □

/ 4-5 □

/ 6-7 □

/ 8-9 □

/ 10-12 □

/ 13-15 □

/ 16-18 □

/ 19-21 □

ಕ್ರೈಸ್ತ ಸಭೆಯ ಬೆಳವಣಿಗೆ

ದಿನಾಂಕ ಅಧ್ಯಾಯ □✔

/ ಅ. ಕಾರ್ಯಗಳು 1-3 □

/ 4-6 □

/ 7-8 □

/ 9-11 □

8

/ ಅ. ಕಾರ್ಯಗಳು (ಮುಂದುವರಿದಿದೆ) 12-14 □

/ 15-16 □

/ 17-19 □

/ 20-21 □

/ 22-23 □

/ 24-26 □

/ 27-28 □

ಪೌಲನ ಪತ್ರಗಳು

ದಿನಾಂಕ ಅಧ್ಯಾಯ □✔

/ ರೋಮನ್ನರಿಗೆ 1-3 □

/ 4-7 □

/ 8-11 □

/ 12-16 □

/ 1 ಕೊರಿಂಥ 1-6 □

/ 7-10 □

/ 11-14 □

/ 15-16 □

/ 2 ಕೊರಿಂಥ 1-6 □

/ 7-10 □

/ 11-13 □

/ ಗಲಾತ್ಯ 1-6 □

/ ಎಫೆಸ 1-6 □

/ ಫಿಲಿಪ್ಪಿ 1-4 □

/ ಕೊಲೊಸ್ಸೆ 1-4 □

/ 1 ಥೆಸಲೊನೀಕ 1-5 □

/ 2 ಥೆಸಲೊನೀಕ 1-3 □

/ 1 ತಿಮೊಥೆಯ 1-6 □

/ 2 ತಿಮೊಥೆಯ 1-4 □

/ ತೀತ/ಫಿಲೆಮೋನ □

/ ಇಬ್ರಿಯ 1-6 □

/ 7-10 □

/ 11-13 □

ಇತರ ಅಪೊಸ್ತಲರು ಮತ್ತು ಶಿಷ್ಯರ ಬರಹಗಳು

ದಿನಾಂಕ ಅಧ್ಯಾಯ □✔

/ ಯಾಕೋಬ 1-5 □

/ 1 ಪೇತ್ರ 1-5 □

/ 2 ಪೇತ್ರ 1-3 □

/ 1 ಯೋಹಾನ 1-5 □

/ 2 ಯೋಹಾನ/3 ಯೋಹಾನ/ಯೂದ □

/ ಪ್ರಕಟನೆ 1-4 □

/ 5-9 □

/ 10-14 □

/ 15-18 □

/ 19-22 □

ಮೊದಲು ಚುಕ್ಕೆ ಸಾಲಿನ ಮೇಲೆ ಕತ್ತರಿಸಿ

ನಂತರ ಎರಡೂ ಪುಟಗಳನ್ನು ಸೇರಿಸಿ ಮಡಚಿ

[ಪುಟ 22ರಲ್ಲಿರುವ ಚಿತ್ರ]

ಪ್ರತಿದಿನ ಬೈಬಲ್‌ ಓದಲು ನೀವು ಸಮಯ ಬದಿಗಿರಿಸಬಲ್ಲಿರೋ?