ಬೈಬಲ್ ಏನು ಹೇಳುತ್ತದೆ?
ದೇವರು ಕಷ್ಟ ಕೊಡುತ್ತಾನಾ?
ನೀವೇನು ಹೇಳುತ್ತೀರಿ?
ಹೌದು
ಇಲ್ಲ
ಕೊಡಬಹುದೇನೊ
ಬೈಬಲ್ ಏನನ್ನುತ್ತದೆ
“ದೇವರು ಕೆಟ್ಟದ್ದನ್ನು ಮಾಡುವ, ಅನ್ಯಾಯವನ್ನು ನಡಿಸುವ ಯೋಚನೆ ಕೂಡ ಮಾಡುವುದಿಲ್ಲ.” (ಯೋಬ 34:10, ನೂತನ ಲೋಕ ಭಾಷಾಂತರ) ಲೋಕದಲ್ಲಿರುವ ಕಷ್ಟಸಂಕಟಗಳಿಗೆ ದೇವರು ಕಾರಣನಲ್ಲ. ಆತನು ಎಂದಿಗೂ ಕಷ್ಟ ಕೊಡುವುದಿಲ್ಲ.
ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?
ಕಷ್ಟಗಳಿಗೆ ಮುಖ್ಯ ಕಾರಣ, ‘ಈ ಲೋಕದ ಅಧಿಪತಿಯಾದ’ ಪಿಶಾಚನಾದ ಸೈತಾನ.—ಯೋಹಾನ 14:30.
ಜನರು ತಪ್ಪಾದ ಆಯ್ಕೆ ಮಾಡುವುದರಿಂದ ಸಹ ಕಷ್ಟ ಬರಬಹುದು.—ಯಾಕೋಬ 1:14, 15.
ಕಷ್ಟಗಳಿಗೆ ಕೊನೆ ಇದೆಯಾ?
ಅನೇಕರ ನಂಬಿಕೆ ಎಲ್ಲರೂ ಸೇರಿ ಪ್ರಯತ್ನಿಸಿದರೆ ಕಷ್ಟಗಳನ್ನು ತೆಗೆದುಹಾಕಬಹುದು ಅಂತ ಕೆಲವರು ನಂಬಿದರೆ, ಇನ್ನು ಕೆಲವರು ಲೋಕದ ಪರಿಸ್ಥಿತಿ ಸುಧಾರಿಸಲು ಸಾಧ್ಯನೇ ಇಲ್ಲ ಎಂದು ನೆನಸುತ್ತಾರೆ. ನೀವೇನು ನೆನಸುತ್ತೀರಿ?
ಬೈಬಲ್ ಏನನ್ನುತ್ತದೆ
ದೇವರು ಕಷ್ಟಗಳನ್ನು ತೆಗೆದುಹಾಕುವನು. “ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:3, 4.
ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?
ಸೈತಾನನು ತಂದಿರುವ ಕಷ್ಟಗಳನ್ನು ದೇವರು ಯೇಸುವಿನ ಮೂಲಕ ತೆಗೆದುಹಾಕುತ್ತಾನೆ.—1 ಯೋಹಾನ 3:8.
ಒಳ್ಳೇ ಜನರು ಶಾಂತಿಯಿಂದ ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುತ್ತಾರೆ.—ಕೀರ್ತನೆ 37:9-11, 29.