ಕೊಲೊಸ್ಸೆಯವರಿಗೆ ಬರೆದ ಪತ್ರ 3:1-25

  • ಹಳೇ ಮತ್ತು ಹೊಸ ವ್ಯಕ್ತಿತ್ವ (1-17)

    • ದೇಹದ ಅಂಗಗಳನ್ನ ಸಾಯಿಸಿ (5)

    • ಎಲ್ರನ್ನೂ ಒಂದು ಮಾಡೋ ಪ್ರೀತಿ (14)

  • ಕ್ರೈಸ್ತ ಕುಟುಂಬಗಳಿಗೆ ಬುದ್ಧಿವಾದ (18-25)

3  ಆದ್ರೆ ಕ್ರಿಸ್ತನ ಜೊತೆ ದೇವರು ನಿಮಗೂ ಮತ್ತೆ ಜೀವ ಕೊಟ್ಟಿದ್ದಾನಲ್ಲಾ.+ ಹಾಗಾಗಿ ಸ್ವರ್ಗದ ವಿಷ್ಯಗಳಿಗಾಗಿ ಶ್ರಮಪಡಿ. ಅಲ್ಲಿ ಕ್ರಿಸ್ತನು ದೇವರ ಬಲಗಡೆ ಕೂತಿದ್ದಾನೆ.+  ಭೂಮಿ ಮೇಲಿರೋ ವಿಷ್ಯಗಳ ಮೇಲಲ್ಲ,+ ಸ್ವರ್ಗದ ವಿಷ್ಯಗಳ ಮೇಲೆ ನೀವು ಮನಸ್ಸಿಡಿ.+  ಯಾಕಂದ್ರೆ ನೀವು ಸತ್ತಿದ್ರಿ, ಈಗ ನಿಮ್ಮ ಜೀವ ದೇವರ ಇಷ್ಟದ ಪ್ರಕಾರ ಕ್ರಿಸ್ತನ ಹತ್ರ ಜೋಪಾನವಾಗಿದೆ.  ನಮ್ಮ ಜೀವವಾಗಿರೋ ಕ್ರಿಸ್ತ+ ರಾಜನಾಗಿ ಬರುವಾಗ ನೀವೂ ಆತನ ಜೊತೆ ರಾಜರಾಗಿ ಆತನ ಮಹಿಮೆಯಲ್ಲಿ ಪಾಲು ತಗೊಳ್ತೀರ.+  ಹಾಗಾಗಿ ಲೈಂಗಿಕ ಅನೈತಿಕತೆ,* ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ,+ ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.+  ಇದನ್ನೆಲ್ಲ ಮಾಡುವವ್ರ ಮೇಲೆ ದೇವರ ಕೋಪ ಬರುತ್ತೆ.  ಒಂದು ಕಾಲದಲ್ಲಿ ನೀವೂ ಅಂಥ ವಿಷ್ಯಗಳನ್ನೇ ಮಾಡ್ತಿದ್ರಿ.+  ಆದ್ರೆ ಈಗ ಕ್ರೋಧ, ಕೋಪ, ಕೆಟ್ಟತನ,+ ಬೈಗುಳಗಳನ್ನ+ ಪೂರ್ತಿ ಬಿಟ್ಟುಬಿಡಿ. ನಿಮ್ಮ ಬಾಯಲ್ಲಿ ಕೆಟ್ಟ ಮಾತು+ ಬರಲೇ ಬಾರದು.  ಒಬ್ರಿಗೊಬ್ರು ಸುಳ್ಳು ಹೇಳಬೇಡಿ.+ ಹಳೇ ವ್ಯಕ್ತಿತ್ವವನ್ನ ಬಟ್ಟೆ ತರ ತೆಗೆದುಹಾಕಿ,+ ಹಿಂದೆ ಮಾಡ್ತಿದ್ದ ವಿಷ್ಯಗಳನ್ನ ಬಿಟ್ಟುಬಿಡಿ. 10  ದೇವರು ಕೊಡೋ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ.+ ಇದನ್ನ ದೇವರು ತನ್ನ ಸ್ವರೂಪದಲ್ಲಿ ಸೃಷ್ಟಿ ಮಾಡಿದ್ದಾನೆ. ನಿಮ್ಮ ವ್ಯಕ್ತಿತ್ವ ದೇವರ ಸ್ವರೂಪದ ತರ+ ಬದ್ಲಾಗೋಕೆ ಆತನ ಸರಿಯಾದ ಜ್ಞಾನಕ್ಕೆ ತಕ್ಕ ಹಾಗೆ ಅದನ್ನ ಹೊಸದು ಮಾಡ್ತಾ ಇರಿ. 11  ಈ ಹೊಸ ವ್ಯಕ್ತಿತ್ವಕ್ಕೆ ಗ್ರೀಕ, ಯೆಹೂದ್ಯ, ಸುನ್ನತಿ ಆದವ, ಸುನ್ನತಿ ಆಗಿಲ್ಲದವ, ವಿದೇಶೀ, ಕಾಡು ಮನುಷ್ಯ,* ದಾಸ, ಸ್ವತಂತ್ರ ವ್ಯಕ್ತಿ ಅನ್ನೋ ಭೇದ ಇಲ್ಲ. ಕ್ರಿಸ್ತನು ಎಲ್ಲದ್ರಲ್ಲೂ ಎಲ್ಲವೂ ಆಗಿದ್ದಾನೆ.+ 12  ದೇವರು ನಿಮ್ಮನ್ನ ಆರಿಸಿದ್ರಿಂದ,+ ನೀವು ಪವಿತ್ರರೂ ಪ್ರಿಯ ಮಕ್ಕಳೂ ಆಗಿರೋದ್ರಿಂದ ಕೋಮಲ ಮಮತೆ, ಅನುಕಂಪ,+ ದಯೆ, ದೀನತೆ,*+ ಸೌಮ್ಯತೆ+ ಮತ್ತು ತಾಳ್ಮೆಯನ್ನ+ ಬಟ್ಟೆ ತರ ಹಾಕ್ಕೊಳ್ಳಿ. 13  ಬೇರೆಯವರು ತಪ್ಪು ಮಾಡಿದ್ರೂ+ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.+ ಯೆಹೋವ* ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.+ 14  ಇದ್ರ ಜೊತೆ ಪ್ರೀತಿಯನ್ನ ಹಾಕ್ಕೊಳ್ಳಿ,+ ಯಾಕಂದ್ರೆ ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ.+ 15  ಕ್ರಿಸ್ತ ಕೊಡೋ ಶಾಂತಿ ನಿಮ್ಮ ಹೃದಯವನ್ನ ಆಳೋಕೆ ಬಿಟ್ಕೊಡಿ.+ ಯಾಕಂದ್ರೆ ನೀವೆಲ್ರೂ ಒಂದೇ ದೇಹ. ನೀವೆಲ್ರೂ ಶಾಂತಿಯಿಂದ ಇರಬೇಕು ಅಂತಾನೇ ದೇವರು ಕರೆದಿದ್ದಾನೆ. ನೀವು ಆ ಸಹಾಯವನ್ನ ಎಷ್ಟು ನೆನಪಿಸ್ಕೊಳ್ತೀರ ಅಂತ ತೋರಿಸಿ. 16  ಕ್ರಿಸ್ತ ಕಲಿಸಿದ ವಿಷ್ಯಗಳೆಲ್ಲ ನಿಮ್ಮ ಹೃದಯದ ತುಂಬ ತುಂಬಿರಲಿ. ಆಗ ವಿವೇಕಿಗಳಾಗ್ತೀರ. ಕೀರ್ತನೆಗಳನ್ನ ಹಾಡ್ತಾ, ದೇವರನ್ನ ಹೊಗಳ್ತಾ, ಧನ್ಯವಾದ ಹೇಳ್ತಾ* ಆರಾಧನಾ ಗೀತೆಗಳನ್ನ ಹಾಡ್ತಾ ಯಾವಾಗ್ಲೂ ಒಬ್ರಿಗೊಬ್ರು ಕಲಿಸಿ, ಪ್ರೋತ್ಸಾಹಿಸಿ.*+ ಅಷ್ಟೇ ಅಲ್ಲ ಯೆಹೋವನಿಗಾಗಿ* ಮನಸಾರೆ* ಗೀತೆಗಳನ್ನ ಹಾಡಿ.+ 17  ನೀವು ಏನೇ ಹೇಳಿದ್ರೂ ಏನೇ ಮಾಡಿದ್ರೂ ಎಲ್ಲವನ್ನ ಪ್ರಭು ಯೇಸು ಹೆಸ್ರಲ್ಲಿ ಮಾಡಿ, ಆತನ ಮೂಲಕ ತಂದೆಯಾದ ದೇವರಿಗೆ ಧನ್ಯವಾದ ಹೇಳಿ.+ 18  ಹೆಂಡತಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿ.+ ಒಡೆಯ ನಿಮ್ಮಿಂದ ಇದನ್ನೇ ಕೇಳೋದು. 19  ಗಂಡಂದಿರೇ, ನಿಮ್ಮ ಹೆಂಡತಿಯರನ್ನ ಪ್ರೀತಿಸ್ತಾ ಇರಿ.+ ಅವ್ರ ಮೇಲೆ ಕೆಂಡ ಕಾರಬೇಡಿ.*+ 20  ಮಕ್ಕಳೇ, ಎಲ್ಲ ವಿಷ್ಯದಲ್ಲಿ ನಿಮ್ಮ ಅಪ್ಪಅಮ್ಮನ ಮಾತು ಕೇಳಿ.+ ನೀವು ಹೀಗೆ ಮಾಡಿದ್ರೆ ಒಡೆಯನಿಗೆ ಖುಷಿ ಆಗುತ್ತೆ. 21  ಅಪ್ಪಂದಿರೇ, ನಿಮ್ಮ ಮಕ್ಕಳಿಗೆ ಕೋಪ ಬರೋ ಹಾಗೆ ಮಾಡಬೇಡಿ.*+ ಹಾಗೆ ಮಾಡಿದ್ರೆ ಅವ್ರ ಮನಸ್ಸು ಒಡೆದುಹೋಗುತ್ತೆ.* 22  ದಾಸರೇ, ಯಾವಾಗ್ಲೂ ನಿಮ್ಮ ಯಜಮಾನರ ಮಾತು ಕೇಳಿ.+ ಮನುಷ್ಯರನ್ನ ಮೆಚ್ಚಿಸಬೇಕಂತ ಅವರು ನೋಡುವಾಗ ಮಾತ್ರ ಕೆಲಸ ಮಾಡ್ದೆ, ಯೆಹೋವನಿಗೆ* ಭಯಪಟ್ಟು ಪ್ರಾಮಾಣಿಕವಾಗಿ ಕೆಲಸಮಾಡಿ. 23  ನೀವು ಏನೇ ಮಾಡಿದ್ರೂ ಅದನ್ನ ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ* ಅಂತ ಪೂರ್ಣ ಮನಸ್ಸಿಂದ ಮಾಡಿ.+ 24  ಯಾಕಂದ್ರೆ ನೀವು ಯೆಹೋವನಿಂದಾನೇ* ಆಸ್ತಿಯನ್ನ ಬಹುಮಾನವಾಗಿ ಪಡ್ಕೊಳ್ತೀರ ಅಂತ ನಿಮಗೆ ಗೊತ್ತಲ್ವಾ.+ ಯಜಮಾನ ಆಗಿರೋ ಕ್ರಿಸ್ತನಿಗೆ ದಾಸರಾಗಿ ಆತನ ಸೇವೆಮಾಡಿ. 25  ತಪ್ಪು ಮಾಡಿದವನಿಗೆ ಶಿಕ್ಷೆ ಸಿಕ್ಕೇ ಸಿಗುತ್ತೆ.+ ಇದ್ರಲ್ಲಿ ಯಾವ ಭೇದಭಾವನೂ ಇಲ್ಲ.+

ಪಾದಟಿಪ್ಪಣಿ

ಅಕ್ಷ. “ಸಿದಿಯ.” ಹಿಂದಿನ ಕಾಲದಲ್ಲಿ ಯಾರನ್ನ ಕೀಳಾಗಿ ನೋಡ್ತಿದ್ರೋ ಅವ್ರನ್ನ ಜನ ಈ ತರ ಕರೀತಿದ್ರು.
ಅಥವಾ “ದೀನಮನಸ್ಸು.”
ಅಥವಾ “ಸೌಜನ್ಯದಿಂದ.”
ಅಥವಾ “ಬುದ್ಧಿಹೇಳಿ.”
ಅಥವಾ “ಎದೆತುಂಬಿ.”
ಅಥವಾ “ಕ್ರೂರವಾಗಿ ನಡ್ಕೊಬೇಡಿ.”
ಅಥವಾ “ಕೆಣಕಬೇಡಿ; ಕಿರಿಕಿರಿ ಮಾಡಬೇಡಿ.”
ಅಥವಾ “ಕುಗ್ಗಿಹೋಗ್ತಾರೆ.”