ಮೀಕ 3:1-12
3 ನಾನು ಹೀಗಂದೆ: “ಯಾಕೋಬನ ಮುಖ್ಯಸ್ಥರೇ,ಇಸ್ರಾಯೇಲ್ ಜನ್ರ ಅಧಿಪತಿಗಳೇ ದಯವಿಟ್ಟು ಕೇಳಿ.+
ನ್ಯಾಯ ಅಂದ್ರೆ ಏನಂತ ನಿಮಗೆ ಗೊತ್ತಿರಬೇಕಲ್ವಾ?
2 ಆದ್ರೆ ನೀವು ಒಳ್ಳೇದನ್ನ ದ್ವೇಷಿಸಿ,+ ಕೆಟ್ಟದ್ದನ್ನ ಪ್ರೀತಿಸ್ತೀರ,+ನನ್ನ ಜನ್ರ ಚರ್ಮ ಸುಲಿದು, ಅವ್ರ ಮೂಳೆಗಳಿಂದ ಮಾಂಸವನ್ನ ಕಿತ್ತುಬಿಡ್ತೀರ.+
3 ಅಷ್ಟೇ ಅಲ್ಲ ನೀವು ನನ್ನ ಜನ್ರ ಮಾಂಸ ತಿಂತೀರ,+ಅವ್ರ ಚರ್ಮ ಸುಲಿತೀರ,ಅಡುಗೆ ಪಾತ್ರೆಯಲ್ಲಿ* ಬೇಯಿಸೋ ಮಾಂಸ ಮತ್ತು ಮೂಳೆಗಳ ತರನೀವು ಅವ್ರ ಮೂಳೆಗಳನ್ನ ಮುರಿದು ಪುಡಿಪುಡಿ ಮಾಡ್ತೀರ.+
4 ಆಗ ಅವರು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡ್ತಾರೆ,ಆದ್ರೆ ಆತನು ಅವ್ರಿಗೆ ಉತ್ತರ ಕೊಡಲ್ಲ.
ಅವರು ಕೆಟ್ಟ ಕೆಲಸ ಮಾಡೋದ್ರಿಂದ+ಆ ಸಮಯದಲ್ಲಿ ಆತನು ಅವ್ರ ಕೈಬಿಡ್ತಾನೆ.*+
5 ಪ್ರವಾದಿಗಳು ನನ್ನ ಜನ್ರನ್ನ ದಾರಿ ತಪ್ಪಿಸ್ತಿದ್ದಾರೆ,+ತಿನ್ನೋಕೆ ಕೊಡುವವ್ರಿಗೆ,*+ ‘ಶಾಂತಿಯಿರಲಿ’ ಅಂತ ಅವರು ಹೇಳ್ತಾರೆ,+ತಮಗೆ ತಿನ್ನೋಕೆ ಕೊಡದವ್ರ ಮೇಲೆ ಯುದ್ಧಕ್ಕೆ ಹೋಗ್ತಾರೆ,ಈ ಪ್ರವಾದಿಗಳ ವಿಷ್ಯದಲ್ಲಿ ಯೆಹೋವ ಹೇಳೋದು ಏನಂದ್ರೆ:
6 ‘ನಿಮ್ಮ ಮೇಲೆ ಕತ್ತಲೆ ಕವಿಯುತ್ತೆ,+ ಆಗ ನಿಮಗೆ ದರ್ಶನ ನೋಡೋಕೆ ಆಗಲ್ಲ,+ನೀವಿರುವಲ್ಲಿ ಕತ್ತಲೆ ಮಾತ್ರ ಇರುತ್ತೆ, ಆಗ ನಿಮಗೆ ಕಣಿಹೇಳೋಕೆ ಆಗಲ್ಲ.
ಪ್ರವಾದಿಗಳ ಬಾಳಲ್ಲಿ ಸೂರ್ಯ ಮುಳುಗ್ತಾನೆ,ಅವ್ರಿಗೆ ಹಗಲು ಇರುಳಾಗುತ್ತೆ.+
7 ದರ್ಶನ ನೋಡುವವ್ರಿಗೆ ಅವಮಾನ ಆಗುತ್ತೆ,+ಕಣಿಹೇಳುವವ್ರಿಗೆ ನಿರಾಶೆ ಆಗುತ್ತೆ.
ಅವ್ರಿಗೆ ದೇವರಿಂದ ಏನೂ ಉತ್ತರ ಸಿಗದ ಕಾರಣ,ಅವ್ರೆಲ್ಲ ತಮ್ಮ ಮೀಸೆಯನ್ನ* ಮುಚ್ಕೊಳ್ತಾರೆ.’”
8 ಯಾಕೋಬನಿಗೆ ಅವನ ದಂಗೆ ಬಗ್ಗೆ, ಇಸ್ರಾಯೇಲಿಗೆ ಅವನ ಪಾಪದ ಬಗ್ಗೆ ಹೇಳೋಕೆನನ್ನಲ್ಲಿ ಯೆಹೋವನ ಪವಿತ್ರಶಕ್ತಿ ಬಲ, ಧೈರ್ಯ ತುಂಬಿದೆ,ನ್ಯಾಯವಾಗಿ ನಡಿಯೋಕೆ ಅದು ನನಗೆ ಸಹಾಯ ಮಾಡಿದೆ.
9 ಯಾಕೋಬನ ವಂಶದ ಮುಖ್ಯಸ್ಥರೇ,ಇಸ್ರಾಯೇಲ್ ಜನ್ರ ಅಧಿಪತಿಗಳೇ, ದಯವಿಟ್ಟು ಇದನ್ನ ಕೇಳಿ,+ನೀವು ನ್ಯಾಯವನ್ನ ಹೇಸ್ತೀರ, ನೆಟ್ಟಗಿರೋದನ್ನೆಲ್ಲ ಸೊಟ್ಟಗೆ ಮಾಡ್ತೀರ,+
10 ನೀವು ಚೀಯೋನನ್ನ ರಕ್ತಪಾತದಿಂದ, ಯೆರೂಸಲೇಮನ್ನ ಅನೀತಿಯಿಂದ ಕಟ್ತೀರ.+
11 ಅದ್ರ ನಾಯಕರು ಲಂಚ ತಗೊಂಡು ತೀರ್ಪು ಕೊಡ್ತಾರೆ,+ಅಲ್ಲಿನ ಪುರೋಹಿತರು ಹಣ ತಗೊಂಡು ಕಲಿಸ್ತಾರೆ,+ಅಲ್ಲಿನ ಪ್ರವಾದಿಗಳು ದುಡ್ಡು* ಪಡ್ಕೊಂಡು ಕಣಿ ಹೇಳ್ತಾರೆ.+
ಆದ್ರೂ ಯೆಹೋವನ ಮೇಲೆ ಭರವಸೆ ಇಟ್ಟು,*“ಯೆಹೋವ ನಮ್ಮ ಜೊತೆ ಇದ್ದಾನಲ್ಲಾ?+
ನಮ್ಮ ಮೇಲೆ ಯಾವ ನಾಶ ಬರಲ್ಲ”+ ಅಂತಾರೆ.
12 ನೀವು ಈ ತರ ಮಾಡ್ತಾ ಇರೋದ್ರಿಂದಚೀಯೋನನ್ನ ಹೊಲ ಊಳೋ ತರ ಉಳುಮೆ ಮಾಡ್ತಾರೆ,ಯೆರೂಸಲೇಮ್ ಹಾಳುಬಿದ್ದ ಪಟ್ಟಣವಾಗುತ್ತೆ,+ದೇವಾಲಯ ಇರೋ ಬೆಟ್ಟ ಕಾಡಲ್ಲಿರೋ ಗುಡ್ಡಗಳ ತರ ಆಗುತ್ತೆ.+
ಪಾದಟಿಪ್ಪಣಿ
^ ಅಥವಾ “ಅಗಲವಾದ ಬಾಯಿ ಇರೋ ಅಡುಗೆ ಪಾತ್ರೆಯಲ್ಲಿ.”
^ ಅಕ್ಷ. “ಅವ್ರಿಂದ ತನ್ನ ಮುಖವನ್ನ ಮರೆಮಾಡ್ತಾನೆ.”
^ ಬಹುಶಃ, “ಅವ್ರಿಗೆ ಅಗಿಯೋಕೆ ಏನಾದ್ರೂ ಇದ್ದಾಗ.”
^ ಅಥವಾ “ಬಾಯಿಯನ್ನ.”
^ ಅಥವಾ “ಬೆಳ್ಳಿ.”
^ ಅಥವಾ “ಭರವಸೆ ಇಟ್ಟಿದ್ದೀವಿ ಅಂತ ಹೇಳ್ಕೊಂಡು.”