ಯೆಶಾಯ 31:1-9

  • ನಿಜ ಸಹಾಯ ಸಿಗೋದು ಮನುಷ್ಯರಿಂದಲ್ಲ, ದೇವರಿಂದ (1-9)

    • ಈಜಿಪ್ಟಿನ ಕುದುರೆಗಳು ಮಾಮೂಲಿ ಪ್ರಾಣಿಗಳೇ (3)

31  ಸಹಾಯಕ್ಕಾಗಿ ಈಜಿಪ್ಟಿನ ಮೊರೆ ಹೋಗುವವರ ಗತಿಯನ್ನ ಏನು ಹೇಳಲಿ!+ ಅವರು ಕುದುರೆಗಳನ್ನ ನೆಚ್ಚಿಕೊಂಡಿದ್ದಾರೆ,+ಯುದ್ಧ ರಥಗಳು ತುಂಬ ಇವೆ ಅಂತ,ಯುದ್ಧಕುದುರೆಗಳು* ಬಲಿಷ್ಠವಾಗಿವೆ ಅಂತ ಅವುಗಳ ಮೇಲೆ ಭರವಸೆ ಇಟ್ಟಿದ್ದಾರೆ. ಆದ್ರೆ ಅವರು ಇಸ್ರಾಯೇಲ್ಯರ ಪವಿತ್ರ ದೇವರ ಕಡೆ ನೋಡಲ್ಲ,ಯೆಹೋವನ ಹತ್ರ ವಾಪಸ್‌ ಬರಲ್ಲ.*   ಆದ್ರೆ ಆತನು ಸಹ ಬುದ್ಧಿವಂತನು, ಆತನು ವಿಪತ್ತನ್ನ ತಂದೇ ತರ್ತಾನೆ,ತನ್ನ ಮಾತನ್ನ ವಾಪಸ್‌ ತಗೊಳ್ಳಲ್ಲ. ಆತನು ಕೆಟ್ಟವರ ಮನೆ ವಿರುದ್ಧ,ತಪ್ಪುಮಾಡುವವರಿಗೆ ಸಹಾಯ ಮಾಡುವವರ ವಿರುದ್ಧ ಎದ್ದೇಳ್ತಾನೆ.+   ಈಜಿಪ್ಟಿನವರು ದೇವರಲ್ಲ, ಅವರೂ ಮನುಷ್ಯರೇ,ಅವ್ರ ಕುದುರೆಗಳು ಅದೃಶ್ಯ ಶಕ್ತಿಯೇನಲ್ಲ, ಅವು ಸಹ ಮಾಮೂಲಿ ಪ್ರಾಣಿಗಳೇ.+ ಶಿಕ್ಷೆ ಕೊಡೋಕೆ ಯೆಹೋವ ತನ್ನ ಕೈ ಚಾಚಿದಾಗ,ಸಹಾಯ ಮಾಡೋಕೆ ಬರೋರು ಎಡವಿ ಬೀಳ್ತಾರೆ,ಸಹಾಯ ಪಡಿಯೋರೂ ಬಿದ್ದುಹೋಗ್ತಾರೆ,ಅವರಿಬ್ರೂ ಒಂದೇ ಸಮಯದಲ್ಲಿ ನಾಶವಾಗಿ ಹೋಗ್ತಾರೆ.   ಯಾಕಂದ್ರೆ ಯೆಹೋವ ನನಗೆ ಹೀಗೆ ಹೇಳಿದ್ದಾನೆ“ಸಿಂಹ, ಬಲಿಷ್ಠ ಎಳೇ ಸಿಂಹ ತನ್ನ ಬೇಟೆಗಾಗಿ ಗರ್ಜಿಸೋ ತರ,ಅದನ್ನ ಓಡಿಸಿಬಿಡೋಕೆ ಕುರುಬರನ್ನೆಲ್ಲ ಕರೆದಾಗ, ಅವ್ರ ಧ್ವನಿಗೆ ಭಯಪಡದೆಆ ಕೋಲಾಹಲಕ್ಕೆ ಹೆದರದೆ ಅದು ಗುರ್ರನ್ನೋ ತರ,ಸೈನ್ಯಗಳ ದೇವರಾದ ಯೆಹೋವ ಚೀಯೋನಿನ ಬೆಟ್ಟಕ್ಕಾಗಿ ಮತ್ತು ಅದ್ರ ಪರ್ವತಕ್ಕಾಗಿಯುದ್ಧ ಮಾಡೋಕೆ ಸ್ವರ್ಗದಿಂದ ಕೆಳಗಿಳಿದು ಬರ್ತಾನೆ.   ಹಾರಾಡೋ ಪಕ್ಷಿ ತನ್ನ ಮರಿಗಳನ್ನ ಕಾಪಾಡೋ ತರ ಸೈನ್ಯಗಳ ದೇವರಾದ ಯೆಹೋವ ವೇಗವಾಗಿ ಬಂದು ಯೆರೂಸಲೇಮನ್ನ ಕಾಪಾಡ್ತಾನೆ.+ ಆತನು ಅದನ್ನ ಕಾಪಾಡಿ ರಕ್ಷಿಸ್ತಾನೆ. ಅದನ್ನ ಜೋಪಾನ ಮಾಡಿ ಸಂರಕ್ಷಿಸ್ತಾನೆ.”  “ಇಸ್ರಾಯೇಲಿನ ಜನ್ರೇ, ನೀವು ನಾಚಿಕೆಬಿಟ್ಟು ಯಾರ ಮೇಲೆ ದಂಗೆ ಎದ್ರೋ ಆತನ ಹತ್ರ ವಾಪಸ್‌ ಬನ್ನಿ.+  ಯಾಕಂದ್ರೆ ಆ ದಿನ ಪ್ರತಿಯೊಬ್ಬನು ಬೆಳ್ಳಿಯಿಂದ ಮಾಡಿದ ತನ್ನ ಕೆಲಸಕ್ಕೆ ಬಾರದ ದೇವರುಗಳನ್ನ, ಬಂಗಾರದಿಂದ ಮಾಡಿದ ಬೆಲೆಯಿಲ್ಲದ ತನ್ನ ದೇವರುಗಳನ್ನ ತಿರಸ್ಕರಿಸ್ತಾನೆ. ಅವುಗಳನ್ನ ನೀವು ನಿಮ್ಮ ಕೈಯಾರೆ ಮಾಡಿ ಪಾಪ ಮಾಡಿದ್ರಿ.   ಅಶ್ಶೂರ್ಯರು ಕತ್ತಿಯಿಂದ ಸಾಯ್ತಾರೆ. ಆದ್ರೆ ಮನುಷ್ಯನ ಕತ್ತಿಯಿಂದಲ್ಲ,ಮನುಷ್ಯರದ್ದಲ್ಲದ ಕತ್ತಿ ಅವ್ರನ್ನ ನುಂಗಿಹಾಕುತ್ತೆ.+ ಕತ್ತಿಯಿಂದಾಗಿ ಅವರು ಓಡಿ ಹೋಗ್ತಾರೆ,ಅವ್ರ ಯುವಕರನ್ನ ಒತ್ತಾಯದಿಂದ ಗುಲಾಮರನ್ನಾಗಿ ಮಾಡ್ಕೊಳ್ಳಲಾಗುತ್ತೆ.   ವಿಪರೀತ ಭಯದಿಂದಾಗಿ ಅವ್ರ ಕಡಿದಾದ ಬಂಡೆ ನಾಶವಾಗಿ ಹೋಗುತ್ತೆ,ಸೂಚನಾಕಂಬ ನೋಡಿ ಅವ್ರ ಅಧಿಕಾರಿಗಳು ಹೆದರಿ ನಡುಗ್ತಾರೆ” ಅಂತ ಯೆಹೋವ ಹೇಳ್ತಿದ್ದಾನೆ. ಆತನ ಜ್ಯೋತಿ* ಚೀಯೋನಲ್ಲಿದೆ, ಆತನ ಕುಲುಮೆ ಯೆರೂಸಲೇಮಲ್ಲಿದೆ.

ಪಾದಟಿಪ್ಪಣಿ

ಅಥವಾ “ಕುದುರೆ ಸವಾರರು.”
ಅಥವಾ “ಯೆಹೋವನನ್ನ ಹುಡುಕಲ್ಲ.”
ಅಥವಾ “ಬೆಂಕಿ.”