ಯೆಶಾಯ 55:1-13

  • ಉಚಿತವಾಗಿ ತಿನ್ನೋಕೆ, ಕುಡಿಯೋಕೆ ಆಹ್ವಾನ (1-5)

  • ಯೆಹೋವನಿಗಾಗಿ ಮತ್ತು ಆತನ ಭರವಸಾರ್ಹ ಮಾತುಗಳಿಗಾಗಿ ಹುಡುಕಿ (6-13)

    • ಮನುಷ್ಯನ ಮಾರ್ಗಗಳಿಗಿಂತ ದೇವರ ಮಾರ್ಗಗಳು ಎಷ್ಟೋ ಉನ್ನತ (8, 9)

    • ದೇವರ ಮಾತು ಖಂಡಿತ ನೆರವೇರುತ್ತೆ (10, 11)

55  ಬಾಯಾರಿದವರೇ,+ ನೀವೆಲ್ಲ ಬಂದು ನೀರು ಕುಡಿರಿ!+ ಹಣ ಇಲ್ಲದವರೇ ನೀವೂ ಬನ್ನಿ! ನೀವೂ ತಗೊಂಡು ತಿನ್ನಿ! ಹೌದು, ಬಂದು ಹಣ ಕೊಡದೆ ಉಚಿತವಾಗಿ+ ದ್ರಾಕ್ಷಾಮದ್ಯವನ್ನೂ ಹಾಲನ್ನೂ+ ತಗೊಳ್ಳಿ.   ಯಾವುದು ಆಹಾರ ಅಲ್ವೋ ಅದನ್ನ ನೀವು ಯಾಕೆ ಹಣ ಕೊಟ್ಟು ಕೊಂಡ್ಕೊಳ್ತೀರ? ಯಾವ ವಿಷ್ಯಗಳು ಸಂತೃಪ್ತಿ ಕೊಡಲ್ವೋ ಅವುಗಳಿಗಾಗಿ ಯಾಕೆ ನಿಮ್ಮ ಸಂಬಳವನ್ನ ಖರ್ಚು ಮಾಡ್ತೀರ? ನಾನು ಹೇಳೋದನ್ನ ಶ್ರದ್ಧೆಯಿಂದ ಕೇಳಿಸ್ಕೊಳ್ಳಿ, ಒಳ್ಳೇ ಆಹಾರ ತಿನ್ನಿ,+ಆಗ ನೀವು ನಿಜವಾದ ಪೌಷ್ಠಿಕ ಆಹಾರ ತಿಂದು ಅತ್ಯಾನಂದ ಪಡ್ತೀರ.+   ಕಿವಿಗೊಟ್ಟು ಕೇಳಿಸ್ಕೊಳ್ಳಿ, ನನ್ನ ಹತ್ರ ಬನ್ನಿ.+ ನಾನು ಹೇಳೋದನ್ನ ಕೇಳಿದ್ರೆ ನೀವು ಜೀವಂತವಾಗಿ ಇರ್ತಿರ,ದಾವೀದನ ಕಡೆ ನನಗೆ ಶಾಶ್ವತ ಪ್ರೀತಿ ಇದೆ ಮತ್ತು ಅದು ನಿಜ ಅಂತ ತೋರಿಸೋಕೆ+ನಾನು ಖಂಡಿತ ನಿಮ್ಮ ಜೊತೆ ಶಾಶ್ವತವಾದ ಒಂದು ಒಪ್ಪಂದ ಮಾಡ್ಕೊಳ್ತೀನಿ.+   ಇಗೋ! ನಾನು ಅವನನ್ನ ಜನಾಂಗಗಳಿಗೆ ಸಾಕ್ಷಿಯಾಗಿನೂ,+ನಾಯಕನಾಗಿನೂ+ ಸೇನಾಪತಿಯಾಗಿನೂ+ ಮಾಡಿದ್ದೀನಿ.   ಇಗೋ! ನಿನಗೆ ಗೊತ್ತಿಲ್ಲದ ಒಂದು ಜನಾಂಗವನ್ನ ನೀನು ಕರಿತೀಯ,ನಿನ್ನನ್ನ ಅರಿಯದ ಜನಾಂಗದವರು ನಿನ್ನ ಹತ್ರ ಓಡೋಡಿ ಬರ್ತಾರೆ. ನಿನ್ನ ದೇವರೂ ಇಸ್ರಾಯೇಲ್ಯರ ಪವಿತ್ರ ದೇವರೂ ಆಗಿರೋ ಯೆಹೋವನಿಂದಾಗಿ ಅವರು ನಿನ್ನ ಹತ್ರ ಬರ್ತಾರೆ.+ ಯಾಕಂದ್ರೆ ಆತನು ನಿನ್ನನ್ನ ಘನತೆಗೇರಿಸ್ತಾನೆ.+   ಯೆಹೋವ ಸಿಗೋ ಸಮ್ಯದಲ್ಲೇ ಆತನಿಗಾಗಿ ಹುಡುಕಿ.+ ಆತನು ಹತ್ರ ಇರೋವಾಗಲೇ ಆತನಿಗೆ ಮೊರೆಯಿಡಿ.+   ಕೆಟ್ಟವನು ತನ್ನ ಮಾರ್ಗವನ್ನ,ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ,+ಅವನು ಯೆಹೋವನ ಹತ್ರ ವಾಪಸ್‌ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ,+ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ* ಕ್ಷಮಿಸ್ತಾನೆ.+   ಯೆಹೋವ ಹೀಗೆ ಹೇಳ್ತಿದ್ದಾನೆ “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳ ತರ ಇಲ್ಲ,+ನನ್ನ ಮಾರ್ಗಗಳು ನಿಮ್ಮ ಮಾರ್ಗಗಳ ತರ ಇಲ್ಲ.   ಭೂಮಿಗಿಂತ ಆಕಾಶ ಎಷ್ಟೋ ಎತ್ರದಲ್ಲಿರೋ ತರ,ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳು ಎಷ್ಟೋ ಉನ್ನತವಾಗಿವೆ,ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಎಷ್ಟೋ ಶ್ರೇಷ್ಠವಾಗಿವೆ.+ 10  ಮಳೆ ಮತ್ತು ಮಂಜು ಆಕಾಶದಿಂದ ಬಿದ್ದುಭೂಮಿಯನ್ನ ತೋಯಿಸಿ ಬೀಜಗಳನ್ನ ಮೊಳಕೆಯೊಡೆಸಿ ಅವು ಫಲ ಕೊಡೋ ತರ ಮಾಡಿ,ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರವನ್ನೂ ಕೊಡದೆ ಹೇಗೆ ಸುಮ್ಮನೆ ವಾಪಸ್‌ ಹೋಗಲ್ವೋ 11  ಹಾಗೇ ನನ್ನ ಬಾಯಿಂದ ಹೊರಡೋ ಮಾತು ಕೂಡ ಇರುತ್ತೆ.+ ಅದು ನಿಜವಾಗದೆ ನನ್ನ ಹತ್ರ ವಾಪಸ್‌ ಬರಲ್ಲ.+ ಅದು ನನ್ನ ಇಷ್ಟವನ್ನೆಲ್ಲ ಖಂಡಿತ ನೆರವೇರಿಸುತ್ತೆ,+ನಾನು ಯಾವ ಕೆಲಸಕ್ಕಾಗಿ ಅದನ್ನ ಕಳಿಸ್ತೀನೋ ಆ ಕೆಲಸವನ್ನ ಸಫಲಗೊಳಿಸಿನೇ ಅದು ವಾಪಸ್‌ ಬರುತ್ತೆ. 12  ನೀವು ಸಂತೋಷದಿಂದ ಹೊರಗೆ ಹೋಗ್ತೀರ,+ನಿಮ್ಮನ್ನ ಶಾಂತಿಯಿಂದ ಕರ್ಕೊಂಡು ಬರಲಾಗುತ್ತೆ.+ ನಿಮ್ಮ ಮುಂದೆ ಪರ್ವತಗಳು, ಬೆಟ್ಟಗಳು ಉಲ್ಲಾಸಿಸ್ತವೆ, ಹರ್ಷದಿಂದ ಕೂಗ್ತವೆ.+ ಹೊಲಗಳಲ್ಲಿರೋ ಎಲ್ಲ ಮರಗಳು ಚಪ್ಪಾಳೆ ಹೊಡೆಯುತ್ತೆ.+ 13  ಮುಳ್ಳುಪೊದೆಗಳ ಬದಲಿಗೆ ಜುನಿಪರ್‌ ಮರ ಬೆಳೆಯುತ್ತೆ,+ತುರಿಕೆ ಹುಟ್ಟಿಸೋ ಗಿಡದ ಬದಲಿಗೆ ಮರ್ಟಲ್‌* ಮರ ಬೆಳೆಯುತ್ತೆ. ಅದು ಯೆಹೋವನಿಗೆ ಕೀರ್ತಿ ತರುತ್ತೆ,+ಯಾವತ್ತಿಗೂ ಅಳಿಯದ ಶಾಶ್ವತ ಗುರುತಾಗಿ ಉಳಿಯುತ್ತೆ.”

ಪಾದಟಿಪ್ಪಣಿ

ಅಥವಾ “ಜಿಪುಣತನ ಮಾಡದೆ.”
ಇದು, ಹೊಳಪಿನ ಎಲೆಗಳು ಮತ್ತು ಸುವಾಸನೆ ಇರೋ ಬಿಳಿ ಹೂವುಗಳನ್ನ ಬಿಡೋ ಪೊದೆ.