ಯೋಬ 26:1-14
26 ಆಗ ಯೋಬ ಏನ್ ಉತ್ತರ ಕೊಟ್ಟ ಅಂದ್ರೆ,
2 “ಬಳಲಿ ಬೆಂಡಾದವನಿಗೆ ನೀನು ದೊಡ್ಡ ಸಹಾಯ ಮಾಡಿಬಿಟ್ಟೆ ನೋಡು!
ಬಲ ಇಲ್ಲದವನಿಗೆ ನೀನು ಊರುಗೋಲಾಗಿ ನಿಂತಿದ್ದೀಯ ನೋಡು!+
3 ನಿನ್ನಂಥ ಬುದ್ಧಿವಂತ ಯಾರೂ ಇಲ್ಲ!
ಬುದ್ಧಿ ಇಲ್ಲದವನಿಗೆ ಎಷ್ಟು ಒಳ್ಳೇ ಬುದ್ಧಿ ಹೇಳ್ದೆ!+
ನಿನ್ನ ತಲೆಯಲ್ಲಿರೋ ಬುದ್ಧಿಯನ್ನ* ನದಿ ತರ ಹರಿಸಿಬಿಟ್ಟೆ!
4 ನೀನು ಯಾರಿಗೆ ಬುದ್ಧಿ ಹೇಳ್ತಾ ಇದ್ದೀಯ?
ಈ ರೀತಿ ಮಾತಾಡೋಕೆ ನಿನಗ್ಯಾರು ಹೇಳ್ಕೊಟ್ರು?
5 ಸತ್ತವರು ಸಮುದ್ರಕ್ಕಿಂತ, ಸಮುದ್ರ ಜೀವಿಗಳಿಗಿಂತ ಅಡಿಯಲ್ಲಿದ್ದಾರೆ,ಅವರು ಗಡಗಡ ನಡುಗ್ತಾರೆ.
6 ಯಾಕಂದ್ರೆ ಸಮಾಧಿಯಲ್ಲಿ* ಯಾವುದೂ ದೇವರ ಕಣ್ಣಿಗೆ ಮರೆಯಾಗಿಲ್ಲ,+ನಾಶನದ ಜಾಗದಲ್ಲಿ* ಇರೋದನ್ನೆಲ್ಲ ಆತನು ನೋಡ್ತಾನೆ.
7 ಆತನು ಆಕಾಶವನ್ನ ಖಾಲಿ ಜಾಗದ* ಮೇಲೆ ಹರಡಿದ್ದಾನೆ,+ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ.
8 ಆತನು ನೀರನ್ನ ಮೋಡಗಳಲ್ಲಿ ತುಂಬಿ ಕಟ್ಟಿಟ್ಟಿದ್ದಾನೆ,+ನೀರಿನ ಭಾರಕ್ಕೆ ಒಡೆದುಹೋಗದ ಹಾಗೆ ಅವುಗಳನ್ನ ಕಟ್ಟಿಟ್ಟಿದ್ದಾನೆ,
9 ತನ್ನ ಸಿಂಹಾಸನ ಕಾಣದ ಹಾಗೆತನ್ನ ಮೋಡಗಳನ್ನ ಹರಡಿದ್ದಾನೆ.+
10 ಆಕಾಶ ಮತ್ತು ಸಮುದ್ರ ಮಧ್ಯ ಗಡಿರೇಖೆ* ಎಳೆದಿದ್ದಾನೆ,+ಬೆಳಕು ಮತ್ತು ಕತ್ತಲೆಯ ಮಧ್ಯ ಗೆರೆ ಹಾಕಿದ್ದಾನೆ.
11 ಆತನ ಗದರಿಕೆಗೆ ಆಕಾಶದ ಆಧಾರ ಕಂಬಗಳು ಅಲುಗಾಡುತ್ತೆ,ಅವು ಹೆದರಿ ಕಂಪಿಸುತ್ತೆ.
12 ಆತನು ತನ್ನ ಶಕ್ತಿಯಿಂದ ಸಮುದ್ರವನ್ನ ಕೋಲಾಹಲ ಮಾಡ್ತಾನೆ,+ತನ್ನ ತಿಳುವಳಿಕೆಯಿಂದ ಸಮುದ್ರದಲ್ಲಿರೋ ದೈತ್ಯಾಕಾರದ ಜೀವಿಯನ್ನ* ತುಂಡು ತುಂಡು ಮಾಡ್ತಾನೆ.+
13 ತನ್ನ ಉಸಿರಿಂದ* ಆಕಾಶವನ್ನ ಶುಚಿ ಮಾಡ್ತಾನೆ,ವೇಗವಾಗಿ ಓಡೋ ಹಾವನ್ನ ಕೈಯಿಂದ ಇರಿತಾನೆ.
14 ನೋಡು! ಇವೆಲ್ಲ ದೇವರು ಮಾಡಿದ ಕೆಲಸಗಳಲ್ಲಿ ಬರೀ ಕೆಲವಷ್ಟೇ,+ಆತನ ಬಗ್ಗೆ ನಮ್ಮ ಕಿವಿಗೆ ಬಿದ್ದಿರೋದು ಪಿಸು ಮಾತಷ್ಟೇ!
ಹೀಗಿರುವಾಗ ಆತನ ಜೋರಾದ ಗರ್ಜನೆಯನ್ನ ಯಾರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ?”+
ಪಾದಟಿಪ್ಪಣಿ
^ ಅಥವಾ “ನಮಗೆ ಪ್ರಯೋಜನ ತರೋ ವಿವೇಕ; ಸಾಮಾನ್ಯ ಜ್ಞಾನವನ್ನ.”
^ ಅಥವಾ “ಶೂನ್ಯದ.”
^ ಇದು, ದಿಗಂತ. ಸಮುದ್ರ ಮತ್ತು ಆಕಾಶ ಸಂಧಿಸೋ ಹಾಗೆ ಕಾಣೋ ಗೆರೆ.
^ ಅಕ್ಷ. “ರಾಹಾಬ್.”
^ ಅಥವಾ “ಗಾಳಿಯಿಂದ.”